Home ಬ್ರೇಕಿಂಗ್ ನ್ಯೂಸ್ 🔥 ಉಳ್ಳಾಲ: ಬೈಕ್ ಅಪಘಾತ -ವೈದ್ಯ ವಿದ್ಯಾರ್ಥಿ ಸಾವು, ಸಹ ಸವಾರ ಗಂಭೀರ

ಉಳ್ಳಾಲ: ಬೈಕ್ ಅಪಘಾತ -ವೈದ್ಯ ವಿದ್ಯಾರ್ಥಿ ಸಾವು, ಸಹ ಸವಾರ ಗಂಭೀರ

0
401

ಉಳ್ಳಾಲ: ಮಂಗಳೂರು ಹೊರವಲಯದ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವನ್ನಪ್ಪಿ, ಸಹಸವಾರ ಗಾಯಗೊಂಡಿದ್ದಾರೆ. ಬೆಂಗಳೂರು ಯಶವಂತಪುರ ನಿವಾಸಿ ಶಿಕ್ಷಕ ಸಿದ್ದರಾಜು ಎಂಬವರ ಪುತ್ರ ನಿಶಾಂತ್ ( 22) ಮೃತರು. ಸಹಸವಾರ ಬೀದರ್ ನಿವಾಸಿ ಶಕೀಬ್ ಗಾಯಗೊಂಡವರು.

ಇಬ್ಬರೂ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟರ್ನ್‌ಷಿಪ್‌ ನಡೆಸುತ್ತಿದ್ದರು. ಕುತ್ತಾರು ಸಿಲಿಕೋನಿಯಾ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಇಬ್ಬರೂ ರಾತ್ರಿ 250 ಸಿಸಿ ಇರುವ ಬೈಕಿನಲ್ಲಿ ರೈಡ್ ತೆರಳುವಾಗ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ ಅಪಘಾತ ಸಂಭವಿಸಿದೆ. ಹಂಪ್‌ನಿಂದ ಹಾರಿದ ಬೈಕ್‌ ಸುಮಾರು ದೂರ ಹೋಗಿ ಬಿದ್ದಿದೆ. ಇಬ್ಬರೂ ಎಸೆಯಲ್ಪಟ್ಟು ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೆಚ್ಚು ವಾಹನ ಸಂಚಾರವಿಲ್ಲದ ರಸ್ತೆಯಾಗಿದ್ದರಿಂದ ರಾತ್ರಿ‌ 12.15 ರ ವೇಳೆಗೆ ಅಪಘಾತ ಸಂಭವಿಸಿದ್ದರೂ ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯರ ಗಮನಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here