ಯು.ಎ.ಇ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಶಾರ್ಜಾ ಕರ್ನಾಟಕ ಸಂಘದ 20ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 13ರಂದು ಭಾನುವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ, ವಿನ್ನರ್ಸ್ ಸ್ಪೋಟ್ರ್ಸ್ ಕ್ಲಬ್, ಅಜ್ಮಾನ್ ನಲ್ಲಿ ನಡೆಯಿತು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ವಿಶ್ವ ಮೆಚ್ಚಿರುವ “ಕಾಂತಾರ” ಬಹುಭಾಷಾ ಚಿತ್ರದ ಕನ್ನಡಿಗ ನಾಯಕ ನಟ ಮತ್ತು ನಿರ್ದೇಶಕರು ಶೆಟ್ಟಿಯವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಗೊಂಡಿದ್ದರು.

ತುಳುನಾಡ ರಕ್ಷಣಾ ವೇದಿಕೆ ಅಂತರಾಷ್ಟ್ರೀಯ ಗೌರವ ಅಧ್ಯಕ್ಷರಾದ ಡಾ. ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್ ರವರಿಗೆ 2022ನೇ ಸಾಲಿನ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಇವರು ಯು.ಎ.ಇ. ಯಲ್ಲಿ ಪ್ರಖ್ಯಾತ ಉದ್ಯಮಿ, ಸಮಾಜ ಸೇವಕರಾಗಿ, ಕರ್ನಾಟಕ ಭಾಷೆ, ಕಲೆ ಸಂಸ್ಕೃತಿಯ ವೈಭವಕ್ಕೆ ಸದಾ ನೆರವು ನೀಡುವ ಪೋಷಕರಾಗಿರುವ ಮೊಸಾಕೊ ಶಿಪ್ಪಿಂಗ್ ಅಂಡ್ ಫಾರ್ವರ್ಡಿಂಗ್- ದುಬಾಯಿ ವ್ಯವಸ್ಥಾಪಕ ನಿರ್ದೇಶಕರು.
ಡಾ. ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್ ರವರ ಸಾಧನೆಗೆ ಶಾರ್ಜಾ ಕರ್ನಾಟಕ ಸಂಘ ನೀಡುತಿರುವ ಪ್ರತಿಷ್ಠಿತ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ” ಯನ್ನು ಪ್ರದಾನಿಸಲಾಯಿತು.
