ಬೆಂಗಳೂರು: ನಟ, ನಿರ್ಮಾಪಕ, ನಿರ್ದೇಶಕ ಮಾಸ್ಟರ್ ಆನಂದ್ ಅವರು ತಮಗೆ ಮೋಸವಾಗಿದೆ ಅಂತ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.
ಮಲ್ಟಿ ಲೀಪ್ ವೆಂಚರ್ಸ್ ಎನ್ನುವ ಕಂಪನಿಯೊಂದು ತಮಗೆ ಸೈಟ್ ನೀಡುವುದಾಗಿ ತಮ್ಮಿಂದ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಆಂತ ಅವರು ಆರೋಪಿಸಿದ್ದಾರೆ.
2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತಮ್ಮನ್ನು ವಂಚಿಸಿದೆ ಅಂತ ಅವರು ಆರೋಪಿಸಿದ್ದಾರೆ. ಮೊದಲು 70 ಲಕ್ಷ ರೂಪಾಯಿಗೆ ಸೈಟ್ ಖರೀದಿ ಒಪ್ಪಂದವಾಗಿ ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಮುಂಗಡ ಹಣ ಮಾಸ್ಟರ್ ಆನಂದ ಕಂಪನಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ.