Tuesday, July 16, 2024
spot_img
More

    Latest Posts

    ಮಂಗಳೂರು: ಅನುಕಂಪ ಬೇಡ ಉದ್ಯೋಗಾವಕಾಶ ಕೊಡಿ – ಪೊಲೀಸ್ ಕಮಿಷನರ್‌ಗೆ ಮಂಜಮ್ಮ ಜೋಗತಿ ಮನವಿ

    ಮಂಗಳೂರು: ನಮ್ಮ ಸಮುದಾಯದ ಬಗ್ಗೆ ಅನುಕಂಪ ಬೇಡ, ಬದಲಾಗಿ ಉದ್ಯೋಗ್ಯಾವಕಾಶ ಕೊಡಿ. ಗಂಡು ದೇಹ ಹೆಣ್ಣಿನ ಮನಸ್ಸು ಹೊಂದಿರುವ ನಮ್ಮ ಸಮುದಾಯದ ಮಂದಿ ಹೆಣ್ಣಿಗಿಂತಲೂ ಚಾಕಚಕ್ಯತೆಯಿಂದ ಕೆಲಸವನ್ನು ನಿಭಾಯಿಸುತ್ತಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪದ್ಮಶ್ರೀ ಮಂಜಮ್ಮ ಜೋಗತಿ ಮನವಿ ಮಾಡಿಕೊಂಡಿದ್ದಾರೆ. ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಹಾಗೂ ಮತ್ತಿತರರ ಸಹಯೋಗದೊಂದಿಗೆ ನಗರದ ರಮಣ ಪೈ ಸಭಾಂಗಣದಲ್ಲಿ ನಡೆದ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸದ ಮಾತನಾಡಿದ ಅವರು, ಕರಾವಳಿ ಸೇರಿದಂತೆ ಮಂಗಳೂರಿನಲ್ಲಿ ತನ್ನ ಸಮುದಾಯದ ಬಹಳಷ್ಟು ಮಂದಿಯಿದ್ದಾರೆ. ಸರಕಾರವೇ ಅವರಿಗೆ ಉದ್ಯೋಗವನ್ನು ಸೃಷ್ಟಿಸಬೇಕೆಂದಿಲ್ಲ. ಇಲ್ಲಿ ಬಹಳಷ್ಟು ಕಂಪೆನಿಗಳಿವೆ. ಆದ್ದರಿಂದ ಸುಶಿಕ್ಷಿತರಿಗೆ ಅವರಿಗೆ ಅರ್ಹವಾದ ಆಪ್ತ ಕಾರ್ಯದರ್ಶಿ, ಹೊಟೇಲ್ ಕೌಂಟರ್ ಗಳಲ್ಲಿ, ಕ್ಲರ್ಕ್ ಕೆಲಸಗಳನ್ನು ಕೊಡಿಸಬಹುದು. ಅದೇ ನಿರಕ್ಷರರಿಗೆ ಕಸ ಗುಡಿಸುವ ಕೆಲಸವಾದರೂ ಸರಿ ಅವರು ಮಾಡುತ್ತಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ನನ್ನ ಸಮುದಾಯದವರ ಸಭೆ ಕರೆದು ಅವರಿಗೆ ಮಾಹಿತಿ ನೀಡಿ ಉದ್ಯೋಗಾವಕಾಶಗಳನ್ನು ಕೊಡಿಸುತ್ತಾರೆಂದು ನಾನು ನಂಬಿದ್ದೇನೆ ಎಂದು ಹೇಳಿದರು. ನಾನು ಬರೀ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡಿದ್ದು, ಆದರೆ ನನ್ನ ಕಲೆಯ ಮೂಲಕ ಕರ್ನಾಟಕದಾದ್ಯಂತ ಹಲವಾರು ಕಾಲೇಜುಗಳ ಮೆಟ್ಟಿಲು ಹತ್ತಿದ್ದೇನೆ. ಕರ್ನಾಟಕದ 15 ವಿವಿಗಳಲ್ಲಿ ನನ್ನ ಜೀವನಕಥೆ ಪಠ್ಯವಾಗಿದೆ. ನನ್ನ ಕೆಲಸವನ್ನು ಗುರುತಿಸಿ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ನಾನು ಕಲೆಯನ್ನು ಕೆಲಸವೆಂದು ನಂಬಿ ಬಹಳ ಶ್ರದ್ಧೆಯಿಂದ ಮಾಡುತ್ತಿದ್ದೇನೆ. ನಾನು ಸಮಯಕ್ಕೆ ಬೆಲೆ ಕೊಡುವವಳು. ಸಮಯಕ್ಕೆ ಬೆಲೆ ಕೊಡುವವರು ಎಲ್ಲೂ ಜಯಿಸುತ್ತಾರೆ. ಅವರು ಎಂದೂ ಸೋಲುವುದಿಲ್ಲ ಎಂದು ಮಂಜಮ್ಮ ಜೋಗತಿ ಹೇಳಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss