ಪುಂಜಾಲಕಟ್ಟೆ: ದುಷ್ಟ ಸಂಹಾರ, ಶಿಷ್ಟರ ರಕ್ಷಣೆಗೆ ಒಂಬತ್ತು ಅವತಾರ ತಾಳಿದ ದುರ್ಗಾಮಾತೆಯ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಮಾತೆಯರ ಕೊಡುಗೆ ಇದೆ ಎಂದು ದಂತ ವೈದ್ಯ ಡಾ.ಬಾಲಚಂದ್ರ ಶೆಟ್ಟಿ ಅವರು ಹೇಳಿದರು.
ಅವರು ಬಂಟ್ವಾಳ ತಾ| ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಶ್ರೀ ಶಾರದೋತ್ಸವ ಸಮಿತಿ ಮತ್ತು ಶ್ರೀ ಗುರು ಫ್ರೆಂಡ್ಸ್ ವತಿಯಿಂದ ಮಾವಿನಕಟ್ಟೆ ಹಿ.ಪ್ರಾ. ಶಾಲಾವಠಾರದಲ್ಲಿ ನಡೆದ ಶ್ರೀ ಶಾರದಾ ಪೂಜೆಯ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಸುಂದರ ಪೂಜಾರಿ ಬೋಳಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.
ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಟ್ರಸ್ಟಿ ಶಿವಪ್ಪ ಪೂಜಾರಿ ಹಟದಡ್ಕ ಅವರು ಮಾತನಾಡಿ, ಯುವ ಜನತೆ ಶ್ರಮದಾನದಲ್ಲಿ ತೊಡಗಿಸಿಕೊಳ್ಳುವುದರಿಂದ ದೇವಸ್ಥಾನ ಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಆರ್ಥಿಕ ಹೊರೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಕುಸುಮಾಕರ ಶೆಟ್ಟಿ ಕೂರಿಯಾಳ, ಮಣಿನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷೆ ಗೀತಾ ಸೇಸಪ್ಪ ಪೂಜಾರಿ, ಗ್ರಾ. ಪ. ಸದಸ್ಯರುಗಳಾದ ಸಾಂತಪ್ಪ ಪೂಜಾರಿ ಹಟದಡ್ಕ, ಸರೋಜಿನಿ, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಸಾಯಿಶಾಂತಿ ಕೋಕಲ, ಶಾರದೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಕೈಯಾಳ, ಶ್ರೀರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ನಾಯಕ್, ಉಪಾಧ್ಯಕ್ಷ ತಿಲಕ್ ಆಳ್ವ ಉಪಸ್ಥಿತರಿದ್ದರು.
ಶ್ರೀ ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು. ಸಾಯಿಶಾಂತಿ ಕೋಕಲ ಪ್ರಸ್ತಾವಿಸಿದರು. ಗುರುರಾಜ್ ಕುಂಟೋನಿ ಕಾರ್ಯಕ್ರಮ ನಿರೂಪಿಸಿದರು
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಗುತ್ತು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
©2021 Tulunada Surya | Developed by CuriousLabs