ಮಂಗಳೂರು:ಭಾರತೀಯ ಸೇನೆಯ ಏರ್ ಪೋರ್ಸ್ ವಿಭಾಗಕ್ಕೆ ಮಂಗಳೂರಿನ ಯುವತಿ ಮನಿಷಾ ಆಯ್ಕೆಯಾಗಿದ್ದಾಳೆ.
ಈ ಮೂಲಕ ಫ್ಲೈಯಿಂಗ್ ಬ್ರ್ಯಾಂಚ್ಗೆ ಆಯ್ಕೆಯಾದ ರಾಜ್ಯದ ಏಕೈಕ ಧೀರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶೋಕನಗರ ನಿವಾಸಿ ಭಾರತೀಯ ಸ್ಟೇಟ್ಬ್ಯಾಂಕ್ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮನಿಷಾ ಭಾರತೀಯ ವಾಯುಪಡೆಯ ಎಲ್ಲಾ ಹಂತದ ಪರೀಕ್ಷೆಯಲ್ಲಿ ಜಯ ಸಾಧಿಸಿ ಫ್ಲೈಯಿಂಗ್ ಬ್ರ್ಯಾಂಚ್ಗೆ ಆಯ್ಕೆಯಾಗಿದ್ದಾರೆ.
ಮನಿಷಾ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು.
ಏರ್ಫೋರ್ಸ್ಗೆ ಆಯ್ಕೆಯಾದ ಮೂವರಲ್ಲಿ ಮಂಗಳೂರಿನ ಮನಿಷಾ ಓರ್ವರು, ಇನ್ನಿಬ್ಬರಲ್ಲಿ ಓರ್ವರು ಲಕ್ನೋ, ಇನ್ನೋರ್ವರು ದೆಹಲಿ ಮೂಲದವರು.
