Tuesday, October 8, 2024
spot_img
More

    Latest Posts

    ಮಂಗಳೂರು: ಅಂದರ್ ಬಾಹರ್ ಆಡುತ್ತಿದ್ದ 7 ಜನರ ಬಂಧನ

    ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್‌ ಆಡುತ್ತಿದ್ದ 7 ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

    ರಾಜಾಸಾಬ್‌ ನದಾಫ್‌, ಕಂಠೇಶ್‌ ಬಿ.ಮೇಲಿನ ಮನಿ, ತಿಮ್ಮಣ್ಣ ವಡ್ಡರ್‌, ಕಲ್ಲಪ್ಪ, ಶರಪ್ಪ, ಶಿವಾನಂದ, ವೀರೇಶ್‌ ಬಂಧಿತ ಆರೋಪಿಗಳಾಗಿದ್ದಾರೆ. ಇವರು 62 ನೇ ತೋಕೂರು ಗ್ರಾಮದ ತೋಕೂರು ರೈಲು ನಿಲ್ದಾಣದ ಸಮೀಪದ ಕಾಡುಪೊದೆಗಳ ಮಧ್ಯೆ ಅಂದರ್‌ ಬಾಹರ್‌ ಜೂಜಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರಿಂದ 5,220 ರೂ. ನಗದು ಸೇರಿ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss