ಮಂಗಳೂರು: ಹೆಸರು ಬೇಳೆ, ಐಸ್ ಕ್ರೀಂ ತಿಂದು ಮಲಗಿದ ಒಂದೇ ಕುಟುಂಬದ ನಾಲ್ವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಜೆಪ್ಪು ಬಪ್ಪಲ್ ನಿವಾಸಿಗಳಾದ ಗಣೇಶ್ ರಾವ್ (52), ಪ್ರಭಾವತಿ (45), ಸೌರಭ್ (20) ಜಾಗ ಪ್ರತೀಕ್ (18) ಅಸ್ವಸ್ಥಗೊಂಡವರು.
ನಿನ್ನೆ ರಾತ್ರಿ ವೇಳೆ ಹೆಸರು ಬೆಳೆ ಹಾಗೂ ಐಸ್ ಕ್ರಿಮ್ ತಿಂದು ಕುಟುಂಬ ಮಲಗಿದ್ದಾರೆ. ಆದರೆ ಇಂದು ಬೆಳಿಗ್ಗೆ ಅವರ ಮನೆಯ ಬಾಗಿಲ ತೆಗೆಯದ ಹಿನ್ನಲೆಯಲ್ಲಿ ಪಕ್ಕದಲ್ಲಿದ್ದ ಸಂಬಂಧಿಕರು ಬಂದು ನೋಡಿದಾಗ ಎಲ್ಲರೂ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ತಕ್ಷಣ ಎಲ್ಲರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇದೀಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ʻ ತುಳುನಾಡ ರಕ್ಷಣಾ ವೇದಿಕೆ ʼ ಖಂಡನೆ ವ್ಯಕ್ತಪಡಿಸಿದ್ದು, ದುರಂತಕ್ಕೆ ಕಾರಣಕರ್ತರಾದ ಆಹಾರ ತಯಾರಕರು ಮತ್ತು ಮಾರಾಟಗಾರರ ಮೇಲೆ ಕ್ರಮಕೈಗೊಳ್ಳಬೇಕು ಸಂತ್ರಸ್ಥ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡುವಂತೆ ʻತುಳುನಾಡ ರಕ್ಷಣಾ ವೇದಿಕೆʼ ಮುಖಂಡ ಪ್ರಶಾಂತ್ ಭಟ್ ಕಡಬ ಆಗ್ರಹಿಸಿದ್ದಾರೆ.