Thursday, March 28, 2024
spot_img
More

    Latest Posts

    ಮಂಗಳೂರು:ಹಾಡಹಗಲೇ ಮಹಿಳೆಯನ್ನುಎಳೆದೊಯ್ದು ದರೋಡೆಗೆ ವಿಫಲ ಯತ್ನ!

    ಮಂಗಳೂರು, ಸ.12 : ಭಾನುವಾರ ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ರಿಡ್ಜ್ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅಪ್ಪರ್ ಬೆಂದೂರ್ವೇಲ್ ನಲ್ಲಿರುವ ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ.

    ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಪ್ರತಿರೋಧ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವರುಗಳು ಅಲ್ಲಿಂದ ತಪ್ಪಿಸಿಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದು, ಈ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇನ್ನು ಆರೋಪಿಗಳ ಪತ್ತೆ ಪ್ರಯತ್ನ ನಡೆದಿದ್ದು ಸದರಿ ಮಹಿಳೆಯ ಪತ್ತೆ ಕೂಡ ಆಗಿಲ್ಲ ಎನ್ನಲಾಗಿದೆ.ಮಹಿಳೆಯ ಆಕೆಯ ಪತ್ತೆಯ ಪ್ರಯತ್ನ ಮಾಡಲಾಗುತ್ತಿದೆ. ಆಕೆಯ ಪತ್ತೆ ಆಗದಿದ್ದಲ್ಲಿ ಸುಮೊಟೊ ಪ್ರಕರಣ ದಾಖಲು ಮಾಡಲಾಗುವುದು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss