Friday, March 29, 2024
spot_img
More

    Latest Posts

    ಮಂಗಳೂರಿಗೆ ಬರಲಿದೆ ರಷ್ಯಾದ ಕಚ್ಚಾ ತೈಲ

    ನವದೆಹಲಿ: ರಷ್ಯಾ ಭಾರೀ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡುತ್ತಿದ್ದು, ಭಾರತ ಸಿಕ್ಕ ಅವಕಾಶವನ್ನು ತಕ್ಕ ಸಮಯದಲ್ಲೇ ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುತ್ತಿದೆ.

    ರಷ್ಯಾ ಭಾರೀ ರಿಯಾಯಿತಿ ಬೆಲೆಯಲ್ಲಿ ಭಾರತಕ್ಕೆ ತೈಲವನ್ನು ನೀಡುವುದಾಗಿ ಭರವಸೆ ನೀಡಿದ್ದು, ಈಗಾಗಲೇ ಭಾರತದ ಹಲವು ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ರಷ್ಯಾದಿಂದ ಭಾರೀ ರಿಯಾಯಿತಿ ಬೆಲೆಯಲ್ಲಿ 30 ಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದರೆ, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಹೆಚ್‌ಪಿಸಿಎಲ್) 20 ಲಕ್ಷ ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ.

    ಇದೀಗ ಮಂಗಳೂರು ಮೂಲದ ಕಂಪನಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್(ಎಂಆರ್‌ಪಿಎಲ್) ಕೂಡಾ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಗೆ ಮುಂದಾಗಿದೆ.

    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುತ್ತಿದ್ದಂತೆ ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಎಲ್ಲಾ ವಸ್ತುಗಳ ಮೇಲೂ ನಿರ್ಭಂದ ಹೇರಿವೆ. ಇದರಿಂದ ರಷ್ಯಾದಿಂದ ಕಚ್ಚಾ ತೈಲ ಸೇರಿದಂತೆ ಹಲವು ವಸ್ತುಗಳು ಇತರ ದೇಶಗಳಿಗೆ ರಫ್ತಾಗುವಲ್ಲಿ ತಡೆಯಾಗಿದೆ. ಹೀಗಾಗಿ ಇದೀಗ ರಷ್ಯಾ ಭಾರೀ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡಲು ಮುಂದಾಗಿದೆ.

    ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ನಿಂದ 99 ಡಾಲರ್‌ಗೆ ಇಳಿಕೆಯಾಗಿದೆ. ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿರುವ ತೈಲವನ್ನು ಖರೀದಿ ಮಾಡುತ್ತಿರುವ ಭಾರತ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ.

    ಭಾರತ ಇದೀಗ ಭಾರೀ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆಯಾದರೂ ಇದರ ಸಾಗಣೆ ಭಾರತಕ್ಕೆ ದೊಡ್ಡ ಹೊರೆಯಾಗಿದೆ. ಇದಕ್ಕೆ ರಷ್ಯಾ ಭಾರತಕ್ಕೆ ಸಾಗಣೆ ಹಾಗೂ ವಿಮೆಯ ಜವಾಬ್ದಾರಿಯನ್ನು ಖುದ್ದಾಗಿ ವಹಿಸುತ್ತದೆ ಎಂಬುದಾಗಿ ಭರವಸೆ ನೀಡಿದೆ.

    ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ನಂತರ ತೈಲ ಬೆಲೆಗಳ ದರವು ಸತತ 5 ಬಾರಿ ಇಳಿಮುಖವಾಗಿದೆ. ಇದೀಗ ಮುಂದೆ ಸವಾಲುಗಳು ಎದುರಾಗಲಿದ್ದು, ಕಚ್ಚಾತೈಲದರ ಏರಿಕೆಯಾಗುವ ಸಾಧ್ಯತೆಯು ಇದೆ. ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಅದರ ನಿರ್ಬಂಧವನ್ನು ಉಲ್ಲಂಘಿಸುವುದಿಲ್ಲ. ಹಾಗಾಗಿಯೇ ಉಕ್ರೇನ್ ಮೇಲಿನ ದಾಳಿಯನ್ನು ಅದು ಬೆಂಬಲಿಸುವಂತೆ ಮಾಡುತ್ತಿದೆ ಎಂದು ಯುಎಸ್ ಶುಕ್ರವಾರ ಹೇಳಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss