Sunday, July 3, 2022

ಮಂಗಳೂರು : ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲವೃತ

ಮಂಗಳೂರು : ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲೇ ನೀರು ನಿಂತಿದ್ದು,...
More

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    ಮಂಗಳೂರು: ಹತ್ತು ವರ್ಷದ ಬಳಿಕ ತನ್ನ ಮನೆ ಸೇರಿದ ಚಾಮರಾಜನಗರದ ವ್ಯಕ್ತಿ..!

    ಮಂಗಳೂರು: ಮಾನಸಿಕ ಅಸ್ವಸ್ಥನಾಗಿ ಮಂಜೇಶ್ವರದ ಸ್ನೇಹಾಲಯದಲ್ಲಿ ಆಶ್ರಯ ಪಡೆಯುತ್ತಿದ್ದ ಚಾಮರಾಜನಗರದ ವ್ಯಕ್ತಿ ಹತ್ತು ವರ್ಷದ ಬಳಿಕ ತನ್ನ ಮನೆ ಸೇರಿದ್ದಾರೆ. ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಊರಿನ ನಿವಾಸಿ ಮಹೇಂದ್ರ ತನ್ನ ಪ್ರಾಥಮಿಕ ವಿಧ್ಯಾಬ್ಯಾಸದ ಬಳಿಕ ತನ್ನದೇ ಆದ ಸ್ವಂತ ಅಂಗಡಿಯಲ್ಲಿ ತಮ್ಮ ತಂದೆಯೊಂದಿಗೆ ವ್ಯಾಪಾರವನ್ನು ನಡೆಸುತ್ತಿದ್ದರು.

    ಒಂದು ದಿನ ಯಾವುದೋ ಕಾರಣಕ್ಕೆ ಉದ್ರೇಕಗೊಂಡು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರೂ ಫಲ ನೀಡಲಿಲ್ಲ. ಈತನ ಈ ಪರಿಸ್ಥಿತಿಯನ್ನು ಕಂಡ ಮನೆಯವರು ದಿಕ್ಕು ಕಾಣದೆ ಕಡೆಗೆ ಈತನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದಾರೆ. ತಿರುಪತಿಯಲ್ಲಿ ಪೂಜೆಯ ಸಂದರ್ಭ ಜನಜಂಗುಳಿಯ ಮಧ್ಯೆ ಕಾಣೆಯಾಗಿದ್ದರು. ಈ ಬಗ್ಗೆ ತಿರುಪತಿಯ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದರು.

    ಕಾಣೆಯಾದ ಮಹೇಂದ್ರ ಮರಳಿ ಮನೆಗೆ ಬರುವನು ಎಂಬ ಆಶಾ ಮನೋಭಾವದೊಂದಿಗೆ ಕುಟುಂಬಸ್ಥರು ಮನೆಗೆ ಮರಳಿದ್ದರು. ತಿರುಪತಿಯಿಂದ ಮರಳಿ ಬಂದ ಕುಟುಂಬಸ್ಥರು ಮಹೇಂದ್ರನ ಬರುವಿಕೆಗೆ ಕಾಯುತ್ತಿದ್ದರು. ಆದರೆ ಮಹೇಂದ್ರನ ಸುಳಿವೇ ಇರಲಿಲ್ಲ. ಮತ್ತೆ ಮನೆಯವರು ಚಾಮರಾಜನಗರದ ಪೋಲಿಸ್ ಠಾಣೆಯಲ್ಲಿ ಮಹೇಂದ್ರ ಕಾಣೆಯಾಗಿರುವುದರ ಬಗ್ಗೆ ದೂರು ನೀಡಿದ್ದರು.

    ಸ್ನೇಹಾಲಯದ ಜೋಸೆಫ್ ಕ್ರಾಸ್ತಾ ಅವರು ಕೆಲಸದ ಮೇರೆಗೆ ತೆರಳಿದ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೊಳಕು ಬಟ್ಟೆಯಲ್ಲಿದ್ದ ಮಹೇಂದ್ರನನ್ನು ಕಂಡು ಅವರನ್ನು ತಮ್ಮ ಮಂಜೇಶ್ವರದ ಸ್ನೇಹಾಲಯ ಆಶ್ರಮಕ್ಕೆ ಕರೆತಂದಿದ್ದು, ಅಲ್ಲಿ ಮಹೇಂದ್ರನನ್ನು ಶುಚಿಗೊಳಿಸಿ ಅವನಿಗೆ ಉತ್ತಮವಾದ ಆಹಾರವನ್ನು ನೀಡಿ ಅವನನ್ನು ಆರೈಕೆ ಮಾಡಿದ್ದಾರೆ. ಮಾನಸಿಕ ಅಸ್ವಸ್ಥನಾದ ಮಹೇಂದ್ರನನ್ನು ನಿರಂತರವಾಗಿ ಸಮಾಲೋಚನೆಗೆ ಒಳಪಡಿಸಿದ್ದಾರೆ. ಆರಂಭದಲ್ಲಿ ಮಂಕಾಗಿದ್ದ ಮಹೇಂದ್ರ ಹಂತ ಹಂತವಾಗಿ ಬದಲಾಗಿದ್ದಾರೆ. ನಂತರ ನಡೆದ ಸಮಾಲೋಚನೆಯಲ್ಲಿ ಆತ ತನ್ನ ಊರಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ವೇಳೆ ಊರಿನ ಬಗ್ಗೆ ಮಾಹಿತಿ ಕಲೆ ಹಾಕಿದ ಸ್ನೇಹಾಲಯ ತಂಡ ಅವನ ಮನೆಯವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆರೋಗ್ಯದಲ್ಲಿ ಚೇತರಿಕೆಕಂಡಿದ್ದ ಮಹೇಂದ್ರನನ್ನು ಆತನ ಊರಿಗೆ ಕರೆದುಕೊಂಡು ಹೋಗಲು ಸ್ನೇಹಾಲಯ ತಂಡ ನಿರ್ಧರಿಸಿದ್ದು, ಆತನನ್ನು ಸ್ನೇಹಾಲಯ ತಂಡ ಆತನ ಊರಿಗೆ ಕರೆದೊಯ್ದಿದೆ.

    ಹತ್ತು ವರ್ಷದಿಂದ ಕಣ್ಮರೆಯಾಗಿದ್ದ ಮಹೇಂದ್ರನನ್ನು ಕಂಡ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಮಹೇಂದ್ರನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಸ್ನೇಹಾಲಯಕ್ಕೆ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

    ಸ್ನೇಹಾಲಯದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಸೆಫ್ ಕ್ರಾಸ್ತಾ ಅವರ ಸ್ನೇಹಾಲಯವು ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು , ಇಂತಹ ಹಲವಾರು ಮಂದಿ ಸ್ನೇಹಾಲಯಲ್ಲಿ ಆಶ್ರಯ ಪಡೆದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇಂತಹ ಅನೇಕ ಉತ್ತಮ ಕೆಲಸಗಳು ಸ್ನೇಹಾಲಯ ಸಂಸ್ಥೆಯಿಂದ ಮುಂದುವರೆಯಲಿ ಎಂಬುದು ನಮ್ಮ ಆಶಯ.

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    Don't Miss

    KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :ಬಸ್ ಪಾಸ್ ಅವಧಿ ವಿಸ್ತರಣೆ

    ಬೆಂಗಳೂರು: 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ...

    ಮಂಗಳೂರು: ಪಂಪ್‌ವೆಲ್‌ನಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಸಂಚಾರಕ್ಕೆ ಅಡಚಣೆ

    ಮಂಗಳೂರು: 5 ದಶಕಕ್ಕೂ ಹಳೆಯದಾದ ನೀರಿನ ಪೈಪ್‌ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್‌ವೆಲ್‌ ಜಂಕ್ಷನ್‌ ಬಳಿ ಮಧ್ಯಾಹ್ನ ವೇಳೆ ನಡೆದಿದೆ.

    ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

    ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು. 70 ರ ದಶಕಗಳಲ್ಲಿ ವರಿಂದರ್...

    ಉತ್ತಮ ಆರೋಗ್ಯಕ್ಕಾಗಿ ಬ್ರೌನ್‌ ರೈಸ್‌ ಸೇವಿಸಿ, ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರವಿದು

    ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ ರೈಸ್‌...

    ಮಂಗಳೂರು: ಸಿಎನ್‍ಜಿ ಬೆಲೆ ಇಳಿಕೆಗೆ ಕೋರಿ ಮನವಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

    ಮಂಗಳೂರು:ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ...