Thursday, March 28, 2024
spot_img
More

    Latest Posts

    ಮಂಗಳೂರು : 22 ವರ್ಷದ ಬಳಿಕ ಸೇಡಿನಿಂದ ಧರ್ಮ ಬದಲಿಸಿದರು; ವಿಚಿತ್ರ ‘ಲವ್ ಜಿಹಾದ್’ !

    ಮಂಗಳೂರು: ‘ಲವ್ ಜಿಹಾದ್’ ಹೆಸರಿನಲ್ಲಿ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಮದುವೆಯ ಹೆಸರಿನಲ್ಲಿ ಹೆಣ್ಣುಮಕ್ಕಳ ಧರ್ಮ ಬದಲಿಸಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಸಾಕಷ್ಟಿವೆ. ಮಂಗಳೂರಿನಲ್ಲಿ ಮುಸ್ಲಿಂ ಧರ್ಮದ ಯುವತಿ ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣ, ಸುಮಾರು 22 ವರ್ಷ ಕಾದ ಆಕೆಯ ಕುಟುಂಬಸ್ಥರು, ಮಹಿಳೆಯ ಮಗಳನ್ನು ಅಪಹರಿಸಿ ಮುಸ್ಲಿಂ ಯುವಕನ ಜತೆ ಸೇರಿಸಿ ಧರ್ಮ ಬದಲಿಸುವ ತಯಾರಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

    ಹೌದು ಗದಗ ಮೂಲದ ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದ ಯುವತಿ 23 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮ ಸ್ವೀಕರಿಸಿ ಯಶೋದಾ ಆಗಿ ಬದಲಾಗಿದ್ದಳು. ಇದು ಆಕೆಯ ತವರು ಮನೆಯವರಿಗೆ ಸಹಿಸಲು ಅಸಾಧ್ಯವಾಗಿತ್ತು. ಇದೇ ಸೇಡಿನಿಂದ ಆಕೆಯ ಕುಟುಂಬ ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು.

    ಸದ್ಯ ಯಶೋದಾಗೆ ರೇಷ್ಮಾ ಎಂಬ ಮಗಳು ಹುಟ್ಟಿದಳು. ರೇಷ್ಮಾಗೆ ಈಗ 22 ವರ್ಷ. ಆಕೆಗೆ ಹಿಂದೂ ಯುವಕನ ಜತೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಯಶೋದಾ ತವರು ಮನೆಯವರು ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ರೇಷ್ಮಾಳನ್ನು ಅಪ್ಪ-ಅಮ್ಮನಿಗೆ ತಿಳಿಯದಂತೆ ಕರೆದುಕೊಂಡು ಹೋಗಿದ್ದಾರೆ.

    ಮಾತ್ರವಲ್ಲದೆ ಆಕೆಯ ಮನವೊಲಿಸಿ ನಿಶ್ಚಿತಾರ್ಥಕ್ಕೆಂದು ತಂದಿಟ್ಟಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಹಣದೊಂದಿಗೆ ಕರೆದುಕೊಂಡು ಹೋಗಿ ಯಶೋದಾಳ ಕುಟುಂಬಸ್ಥರು ಆಕೆಗೆ ಅಕ್ಕನ ಮಗನ ಜತೆಯೇ ಮದುವೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಮನೆಯಲ್ಲಿದ್ದ ಹಣವನ್ನೆಲ್ಲಾ ಆಕೆ ತನ್ನ ಅಕ್ಕನ ಮಗ ಅಕ್ರಂ ಹೆಸರಿಗೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss