Saturday, December 9, 2023

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ‘ಉಚಿತ ತರಬೇತಿ’ಗೆಳಿಗೆ ಅರ್ಜಿ ಆಹ್ವಾನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರುಡ್ ಸೆಟ್ ಸಂಸ್ಥೆಯ ಮೂಲಕ ವಿವಿಧ ಉಚಿತ ತರಬೇತಿಗಳನ್ನು ಸ್ವ-ಉದ್ಯೋಗಾಕಾಂಕ್ಷಿಗಳಿಗೆ ನೀಡಲಾಗುತ್ತಿದೆ. ಇದೀಗ ವಿವಿಧ ಕೋರ್ಸ್ ಗಳಿಗೆ ಉಚಿತ ತರಬೇತಿಗಾಗಿ ಅರ್ಜಿಯನ್ನು...
More

    Latest Posts

    ಬಂಟ್ವಾಳ : ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ|ಆರೋಪಿ ಸುಮ್ಮಿ ಅಲಿಯಾಸ್ ಸುಮಿತ್ ಆಳ್ವ & ಗ್ಯಾಂಗ್ ಬಂಧನ…!

    ಬಂಟ್ವಾಳ : ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೈದು ಮಂದಿಯ ಗುಂಪು ಗೇಟ್ ಬಿಸಾಕಿ ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು...

    ಬಂಟ್ವಾಳ: ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ

    ಬಂಟ್ವಾಳ : ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ...

    ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ಪೋಲಿಸ್‌ ಅಧೀಕ್ಷಕರಾದ ಡಾ. ಅರುಣ್‌ ರವರ ಭೇಟಿ

    ಇಂದು 08-12-2023 ರಂದು ಮಧ್ಯಾಹ್ನ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು...

    ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ಜಿಲ್ಲಾಧಿಕಾರಿ ವಿಧ್ಯಾಕುಮಾರಿಯವರ ಭೇಟಿ

    ಇಂದು 08-12-2023 ರಂದು ಸಂಜೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು...

    ಮಂಚಿಯಲ್ಲಿ ಸಭಾ ಕೌಶಲ್ಯ ತರಬೇತಿ ಹಾಗೂ ಹಾಗೂ ನಿವೃತ್ತ ಯೋಧರಿಗೆ ಗೌರವ ಸನ್ಮಾನ

    ಮಂಚಿ -ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ, ಲಯನ್ಸ್ ಕ್ಲಬ್ ಕೊಳ್ನಾಡು, ಸಾಲೆತ್ತೂರು ಹಾಗೂ ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಸಹಯೋಗದಲ್ಲಿ ಮಂಚಿ ಪ್ರೌಢಶಾಲೆಯ ಸಭಾಂಗಣದಲ್ಲಿ ಒಂದು ದಿನದ ಸಭಾ ಕೌಶಲ್ಯ ತರಬೇತಿ ಕಾರ್ಯಾಗಾರ ಹಾಗೂ ನಿವೃತ್ತ ಯೋಧರಿಗೆ ಗೌರವ ಸನ್ಮಾನ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉಪನ್ಯಾಸಕರಾದ ಡಾ. ನಾಗವೇಣಿ ಮಂಚಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, “ಬಾಲ್ಯದಲ್ಲಿ ಶಿಕ್ಷಕರು ಕಟ್ಟಿಕೊಡುವ ಜೀವನ ಮೌಲ್ಯಗಳು ನಮ್ಮ ಬದುಕನ್ನು ರೂಪಿಸಬಲ್ಲವು. ನಾಲ್ಕು ಗೋಡೆಯೊಳಗಿನ ಪಾಠದ ಉಪದೇಶಗಳ ಬದಲಾಗಿ ತೋರುವ ಪ್ರೋತ್ಸಾಹ, ಸೌಜನ್ಯತೆ, ಪ್ರೀತಿ, ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲವು. ಪಾಠ ಪುಸ್ತಕಗಳಿಂದ ಹೆಚ್ಚು ಒಲವು ಕೊಡುತ್ತಿದ್ದ ಚಂದಮಾಮ ದ ಕಥೆಗಳು ಹೆಚ್ಚು ಆಕರ್ಷಿತಗೊಳಿಸಿ ನಮ್ಮನ್ನು ಓದುಗಾರರನ್ನಾಗಿಸಿತು. ಬಾಯಿಪಾಠದ ಗೀಳಿನಿಂದ ಹೊರಬಂದು ಮನನ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದರಿಂದ ಬರಹಗಾರರಾಗಲು ಸಾಧ್ಯವಾಯಿತು.” ಎಂದರು.
    ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ, ಮಂಚಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ಕಾಮತ್ ಪುಚ್ಚೆಕೆರೆ ಮತ್ತು ದಿನೇಶ್ ಎಸ್ ಇರಾ ಇವರನ್ನು ಸನ್ಮಾನಿಸಲಾಯಿತು.

    ಶಾಲಾ ಹಿರಿಯ ವಿದ್ಯಾರ್ಥಿ ಮಂಗಳೂರಿನ ಪ್ರಖ್ಯಾತ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಶೇಖ್ ಮೊಯ್ದೀನ್ ಕೆ.ಎಂ. ಮಾತನಾಡಿ, “ಹೈಸ್ಕೂಲ್ ಜೀವನ ಸುಂದರ ಅನುಭವ, ಭವಿಷ್ಯದ ಎಲ್ಲಾ ಹಂತಗಳಿಗೆ ಪಂಚಾಂಗವೆನ್ನಬಹುದಾದ ಆ ಕಾಲದಲ್ಲಿ ನಾವು ಬೆಳೆಸುವ ಸಂಸ್ಕಾರಗಳು ನಮ್ಮ ಜೀವನಕ್ಕೆ ಮೆಟ್ಟಿಲಾಗುತ್ತವೆ. ನಿರ್ದಿಷ್ಟ ಗುರಿಯೊಂದಿಗೆ ಸಾಧಿಸುವ ಛಲವನ್ನು ಹೊಂದಿ ಮುನ್ನಡೆಯಬೇಕಾದದ್ದು ಯುವ ಸಮುದಾಯದ ಧ್ಯೇಯವಾಗಬೇಕು.” ಎಂದರು.
    ಲಯನ್ಸ್ ಕ್ಲಬ್ ಎಂಪವರ್ ಯೂತ್ ನ ಜಿಲ್ಲಾ ಸಹ ಸಂಯೋಜಕಿ ಡಾ. ಸ್ನೇಹಾ ಎಂ, ಮಂಚಿ ಕೊಳ್ನಾಡು ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯನಿ ಶ್ರೀಮತಿ ಸುಶೀಲ ವಿಟ್ಲ, ಮಂಚಿ ಪ್ರೌಢಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
    ಸಭಾ ಕೌಶಲ್ಯ ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಜೆ.ಸಿ.ಐ ರಾಷ್ಟ್ರೀಯ ತರಬೇತುದಾರರಾದ ಡಾ. ರಾಘವೇಂದ್ರ ಹೊಳ್ಳ ಎನ್ ಇವರು ಭಾಗವಹಿಸಿ ಮಾರ್ಗದರ್ಶನ ನೀಡಿದರು. ನೆರೆದಿದ್ದ ಸುಮಾರು 60 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಒಂದು ದಿನ ಪೂರ್ತಿಯಾಗಿ ನಡೆದ ಈ ಕಾರ್ಯಗಾರವು ವಿದ್ಯಾರ್ಥಿಗಳಲ್ಲಿ ಸಭಾ ಕೌಶಲ್ಯವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
    ಇದೇ ಸಂದರ್ಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.ಸಭಾಧ್ಯಕ್ಷತೆಯನ್ನು ಅಲಂಕರಿಸಿದ ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ ಹಿರಿಯ ವಿದ್ಯಾರ್ಥಿಗಳ ಸಂಘದ ಧ್ಯೇಯೋದ್ದೇಶಗಳನ್ನು ಸ್ಪಷ್ಟಪಡಿಸಿದರು.

    ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಜಯಪ್ರಕಾಶ್ ರೈ ಮೇರಾವು ವಂದಿಸಿದರು. ಯಕ್ಷಗಾನ ಕಲಾವಿದ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಪುಷ್ಪರಾಜ್ ಕಾರ್ಯಕ್ರಮ ನಿರ್ವಹಿಸಿದರು.

    Latest Posts

    ಬಂಟ್ವಾಳ : ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ|ಆರೋಪಿ ಸುಮ್ಮಿ ಅಲಿಯಾಸ್ ಸುಮಿತ್ ಆಳ್ವ & ಗ್ಯಾಂಗ್ ಬಂಧನ…!

    ಬಂಟ್ವಾಳ : ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೈದು ಮಂದಿಯ ಗುಂಪು ಗೇಟ್ ಬಿಸಾಕಿ ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು...

    ಬಂಟ್ವಾಳ: ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ

    ಬಂಟ್ವಾಳ : ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ...

    ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ಪೋಲಿಸ್‌ ಅಧೀಕ್ಷಕರಾದ ಡಾ. ಅರುಣ್‌ ರವರ ಭೇಟಿ

    ಇಂದು 08-12-2023 ರಂದು ಮಧ್ಯಾಹ್ನ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು...

    ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ಜಿಲ್ಲಾಧಿಕಾರಿ ವಿಧ್ಯಾಕುಮಾರಿಯವರ ಭೇಟಿ

    ಇಂದು 08-12-2023 ರಂದು ಸಂಜೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು...

    Don't Miss

    2 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದಾಕೆ ನೇಣಿಗೆ ಶರಣು

    ಬೆಂಗಳೂರು): ಎರಡು ತಿಂಗಳ ಹಿಂದೆಷ್ಟೆ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಅನುಷಾ (23) ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

    ಹಾಗಲಕಾಯಿ ತಿನ್ನುವುದರಿಂದ ಸಿಗಲಿವೆ ಈ ಆರೋಗ್ಯ ಲಾಭಗಳು.!

    ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಲಕಾಯಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ, ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗಲಕಾಯಿ ಅನೇಕ ರೋಗಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ (ಹಾಗಲಕಾಯಿಯ...

    ಉಡುಪಿ: ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಕಳವು

    ಉಡುಪಿ: ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಸಂತೆಕಟ್ಟೆಯ ಸೋಲಾಂಗೆ ಸ್ಮಿತಾ ಲೂಯಿಸ್‌ ಅವರು ಮುಂಬಯಿಗೆ ತೆರಳಿದ್ದು, ನ. 29 ರಂದು...

    ಮಂಗಳೂರು: ಶಿಶುವನ್ನು ಹತ್ಯೆಗೈದು ಬಾಣಂತಿ ನೇಣಿಗೆ ಶರಣು..!

    ಮಂಗಳೂರು: ಬಾಣಂತಿಯೊಬ್ಬಳು ನಾಲ್ಕುವರೆ ತಿಂಗಳ ಗಂಡು ಶಿಶುವನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ಫ್ಲ್ಯಾಟ್ ನಲ್ಲಿ ನಡೆದಿದೆ. ಫಾತಿಮಾ...

    ಬೆಂಗಳೂರು: ಮೇಲಾಧಿಕಾರಿಗಳ ಕಿರುಕುಳ-ವೈದ್ಯರು ಆತ್ಮಹತ್ಯೆ..!

    ಬೆಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಯಾಗಿದ್ದ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಡಾಕ್ಟರ್ ಮೃತದೇಹ ಪತ್ತೆಯಾಗಿದೆ. ಮೃತ...