ಬೆಳ್ತಂಗಡಿ : ರಬ್ಬರ್ ಟ್ಯಾಂಪಿಗ್ ಗೆಂದು ತೋಟಕ್ಕೆ ಹೋದ ವ್ಯಕ್ತಿ ತೋಟದಲ್ಲಿ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜದಲ್ಲಿ ನಡೆದಿದೆ.ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಉದಯಗೌಡ(43) ಮೃತ ದುರ್ದೈವಿ. ಉದಯ ಗೌಡ ಅವರು ರಬ್ಬರ್ ಟ್ಯಾಪಿಂಗ್ ಗೆಂದು ತೋಟಕ್ಕೆ ರವಿವಾರ ಬೆಳಗ್ಗೆ ತೆರಳಿದ್ದು,ಮಧ್ಯಾಹ್ನ ವಾದರೂ ಮನೆಗೆ ಮರಳಿ ಬರದಿರುವ ಕಾರಣ,ಮನೆ ಯ ಮಂದಿ ಮತ್ತು ಸ್ಥಳೀಯರು ತೋಟದಲ್ಲಿ ಹುಡುಕಾಡಿದ್ದು,ಈ ವೇಳೆ ತೋಟದ ಬಳಿ ಹಡೀಲು ಬಿದ್ದ ಗದ್ದೆಯಲ್ಲಿ ಉದಯ ಗೌಡ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಕೆಲ ಕೃಷಿಕರು ತೋಟಕ್ಕೆ ಹಾವಳಿ ಇಡುವ ಕಾಡುಪ್ರಾಣಿಗಳಿಗೆಂದು ಮೆಸ್ಕಾಂ ಅನುಮತಿ ಪಡೆಯದೇ ಪಂಪ್ ಶೆಡ್ ನಿಂದ ವಿದ್ಯುತ್ ನ್ನು ವಯರ್ ಗೆ ನೀಡಿದ್ದು,ವಯರ್ ಇರುವುದನ್ನು ಗಮನಿಸದ ಉದಯ ಗೌಡ ವಯರ್ ತುಳಿದು ವಿದ್ಯುತ್ ಶಾಕ್ ಗೆ ಒಳಗಾಗಿ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಉದಯ್ ಅಣ್ಣ ಯೋಗೀಶ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
