ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿಯೊಬ್ವರು ದಾರುಣವಾಗಿ ಮೃತಪಟ್ಟಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುರ ಎಂಬಲ್ಲಿ ನಡೆದಿದೆ. ಪುತ್ತೂರು ಕಲ್ಲೇಗ ನಿವಾಸಿ ಬಲ್ನಾಡಿನಲ್ಲಿ ವಾಸ್ತವ್ಯವಿರುವ ವಿಜಯ ಗೌಡ (52) ಎಂಬವರು ರೈಲಿನಡಿಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇಲ್ಲಿನ ಮುರ ಗೌಡ ಸಮುದಾಯ ಭವನದಲ್ಲಿ ಉತ್ತರಕ್ರಿಯೆ ಕಾರ್ಯಕ್ರಮವೊಂದಕ್ಕೆ ಬಂದ ವಿಜಯ ಗೌಡ ಅವರು ಮುರ ಸಮೀಪ ರೈಲು ಹಳಿಯಲ್ಲಿ ಬರುತ್ತಿದ್ದ ವೇಳೆ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
