ಪಶ್ಚಿಮ ಬಂಗಾಳ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಂದಿಗ್ರಾಮದಿಂದ ನಿಂತು 1956 ಮತಗಳ ಅಂತರದಿಂದ ಸುವೇಂಧು ಅಧಿಕಾರಿವಿರುದ್ಧ ಸೋಲನ್ನಪ್ಪಿದ್ದರು. ಇಂತಹ ಸಿಎಂ ಮಮತಾ ಬ್ಯಾನರ್ಜಿಯವರು, ಮತ್ತೆ ಸಿಎಂ ಆಗಿ ಪಶ್ಚಿಮ ಬಂಗಾಳದಲ್ಲಿ ಪ್ರಮಾಣ ವಚನ ಸ್ವೀಕರಿಸೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಮೇ.5ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಟಿಎಂಸಿ ಮುಖಂಡ ಹಾಗೂ ಸಚಿವ ಪ್ರತಾಪ್ ಚಟರ್ಜಿ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಮತಾ ಬ್ಯಾನರ್ಜಿಯವರು ಮೇ.5ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ನಂದಿಗ್ರಾಮದಲ್ಲಿ ಸೋಲು ಕಂಡಿರುವ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಬಹುದೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಧಿಸಿದ್ದಕ್ಕಿಂತ ದೊಡ್ಡ ವಿಜಯವನ್ನು ದಾಖಲಿಸಿದೆ, ಆದರೆ ಮಮತಾ ಬ್ಯಾನರ್ಜಿ ಮಾತ್ರ ನಂದಿ ಗ್ರಾಮದಲ್ಲಿ ಸೋಲು ಕಂಡಿದ್ದಾರೆ.ಇಂಥಹ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಉಳಿಯಬಹುದೇ? ಸಾಂವಿಧಾನಿಕವಾಗಿ, ಈ ಪ್ರಶ್ನೆಗೆ ಉತ್ತರ ‘ಹೌದು’. ಆಗಿದೆ. ಭಾರತದ ಸಾಂವಿಧಾನಿಕ ಯೋಜನೆಯಲ್ಲಿ, ಯಾರೇ ಆಗಲಿ, ಶಾಸಕರಾಗಿರದೆ ಮುಖ್ಯಮಂತ್ರಿ ಅಥವಾ ಮಂತ್ರಿ ಅಥವಾ ಲೋಕಸಭಾ ಸದಸ್ಯ ರಾಗದೆ ಪ್ರಧಾನ ಮಂತ್ರಿಯಾಗಿ ನೇಮಕಗೊಳ್ಳಬಹುದು. ಆದರೆ ಅಂತಹ ವ್ಯಕ್ತಿ ನೇಮಕವಾದ ಆರು ತಿಂಗಳೊಳಗೆ ಜನರಿಂದ ಆಯ್ಕೆ ಆಗಬೇಕು ಇಲ್ಲವೇ ರಾಜ್ಯಸಭೆ/ವಿಧಾನ ಪರಿಷತ್ತು ನಿಂದ ಆಯ್ಕೆಯಾಗಬೇಕಾಗಿದೆ.
ಹಲವಾರು ಸಂದರ್ಭಗಳಲ್ಲಿ ಶಾಸಕರಲ್ಲದವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂಥ ಹಲವಾರು ಉದಾಹರಣೆಗಳು ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಈ ಹಿಂದೆ ನೆಡೆದಿದೆ.
