Friday, March 29, 2024
spot_img
More

    Latest Posts

    ಮಲ್ಪೆ ಬೀಚ್​ ತೇಲುವ ಸೇತುವೆ ಸಮುದ್ರಪಾಲು

    ಉಡುಪಿ: ಮಲ್ಪೆ ಬೀಚ್​ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿದ್ದ ತೇಲುವ ಸೇತುವೆ ಎರಡೇ ದಿನಕ್ಕೆ ಸಮುದ್ರ ಪಾಲಾಗಿದೆ. ಮುರಿದು ಹೋಗಿರುವ ತೇಲುವ ಸೇತುವೆ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.

    ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ನಿರ್ಮಾಣವಾಗಿದ್ದ ತೇಲುವ ಸೇತುವೆ, ಮಲ್ಪೆ ಬೀಚ್​ನ ಪ್ರಮುಖ ಆಕರ್ಷಣೆಯಾಗುವ ಹಂತದಲ್ಲಿತ್ತು.

    ಸದ್ಯ ಸೇತುವೆಗೆ ಅಳವಡಿಸಲಾದ ತೇಲುವ ಇಂಟರ್ ಲಾಕಿಂಗ್ ಪ್ಲೇಟ್ ನಿರಂತರವಾಗಿ ಹೊಡೆಯುವ ಅಲೆಗಳ ರಭಸಕ್ಕೆ ಮುರಿದು ದಡ ಸೇರಿವೆ.

    ಸಮುದ್ರದ ತೆರೆಗಳ ಮೇಲೆ ತೇಲಿ ಸಾಗುವ ಹಾಗಿದ್ದ ಸೇತುವೆಯು ಅಲೆಗಳ ರಭಸ ತಡೆದುಕೊಳ್ಳಲಾಗಿದೆ ಮುರಿದು ಹೋಗಿದೆ. ಕಳೆದ ಶುಕ್ರವಾರವಷ್ಟೆ ಮಲ್ಪೆ ಬೀಚ್​ನಲ್ಲಿ ನಿರ್ಮಾಣವಾಗಿದ್ದ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದ್ದರು.

    100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಕರ್ನಾಟಕವನ್ನು ಹೊರತುಪಡಿಸಿದರೆ ಕೇರಳ ರಾಜ್ಯದ ಬೇಫೂರ್ ಬೀಚ್​ನಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಿಸಲಾಗಿದೆ. ಸದ್ಯ ಸೇತುವೆಯ ದುರಸ್ಥಿ ಕಾರ್ಯವು ಕೂಡ ನಡೆಯುತ್ತಿದ್ದು ಶೀಘ್ರದಲ್ಲೆ ಪ್ರವಾಸಿಗರ ಬಳಕೆಗೆ ತೇಲುವ ಸೇತುವೆ ಲಭ್ಯವಾಗಲಿದೆ ಎನ್ನಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss