ಮೂಡುಬಿದಿರೆ: ವಿದ್ಯೆ, ಶಿಸ್ತು, ಸಂಸ್ಕಾರದೊಂದಿಗೆ ಕಠಿನ ಪರಿಶ್ರಮ, ಗುರಿಯನ್ನು ಸಾಧಿಸುವ ಹಂಬಲ ಹಾಗೂ ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿಯಶಸ್ಸನ್ನು ಗಳಿಸಲು ಸಾಧ್ಯ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣ ಪಡೆಯಿರಿ ಎಂದು ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಮತ್ತು ಮುಂಬಯಿ ಆರ್ಗಾನಿಕ್ ಇಂಡಸ್ಟ್ರೀಸ್ ಪೈ.ಲಿ. ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆನಂದ ಎಂ. ಶೆಟ್ಟಿ ಹೇಳಿದರು. ಅವರು ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ದಿನಾಚರಣೆಯ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ| ಫ್ರಾಂಕ್ ಫೆರ್ನಾಂಡಿಸ್ ಮಾತನಾಡಿ, ಗುರುವೆಂದರೆ ಜ್ಞಾನಗಳ ಸಂಗಮ. ಗುರುವಿನ ಮಾರ್ಗದರ್ಶನದಿಂದ ಜೀವನ ಮುಕ್ತಿಯನ್ನು ಪಡೆಯಲು ಸಾಧ್ಯ. ವಿದ್ಯೆ, ಅಧ್ಯಾಪಕ ಮತ್ತು ವಿದ್ಯಾ ಸಂಸ್ಥೆಗಳು ಸಮಾಜದ ಉನ್ನತಿಯನ್ನು ನಿರ್ಧರಿಸುವ ಅಂಶಗಳು ಎಂದು ತಿಳಿಸಿ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾಸಂಸ್ಥೆಯನ್ನು ಸದಾ ನೆನಪಿಟ್ಟು ಸಂಸ್ಥೆಯ ಹಿತಚಿಂತನೆ ಮಾಡುತ್ತಿರಬೇಕು ಎಂದರು.
ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಅವರು ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸಿಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ| ಹರೀಶ್ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮಂಗಳೂರು ವಿವಿ ಬಿ.ಕಾಂ. ಉಪಸ್ಥಿತರಿದ್ದರು.
ಪರೀಕ್ಷೆಯಲ್ಲಿ 9ನೇ ಬ್ಯಾಂಕ್ ವಿಜೇತೆ ಜಸ್ಥಿತಾ ರಾಡ್ರಿಗಸ್ ರವರನ್ನು ಸಮ್ಮಾನಿಸಲಾಯಿತು. ದತ್ತಿನಿಧಿ ಪುರಸ್ಕಾರಗಳು
ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಪಠೇತರ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶನ್ ಸ್ವಾಗತಿಸಿ, ಕಾರ್ಯದರ್ಶಿ ಜ್ಯೋತ್ಸಾ ವಂದಿಸಿದರು. ರಿಯೋನಾ ಪಿಂಟೊ ನಿರೂಪಿಸಿದರು.
