Friday, April 19, 2024
spot_img
More

    Latest Posts

    ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಎಲ್‌ಪಿಜಿ ಶಾಕ್- ಬರೋಬ್ಬರಿ 250 ರೂ. ಏರಿಕೆ

    ನವದೆಹಲಿ: ಕಳೆದ ಒಂದು ವಾರದಿಂದ ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರದ ನಡುವೆ ವಾಣಿಜ್ಯ ಗ್ಯಾಸ್‌ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವುದು ಯುಗಾದಿ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.

    ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಮತ್ತೆ ಏರಿಕೆ ಮಾಡಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ 19 ಕೆಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗಳಷ್ಟು ಹೆಚ್ಚಿಸಿದೆ. ಎಲ್‌ಪಿಜಿ ಪರಿಷ್ಕೃತ ದರವನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆ ಇದೇ ಮೊದಲಬಾರಿಗೆ 250 ರೂ. ಏರಿಕೆಯಾಗಿರುವುದು ಕಂಡುಬಂದಿದೆ. 

    ಇಂದಿನಿಂದಲೇ ಬೆಲೆ ಹೆಚ್ಚಳವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್‌ನ ಬೆಲೆ ಪ್ರತಿ ಯೂನಿಟ್‌ಗೆ 2,253 ರೂ., ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2,351 ರೂ., ಮುಂಬೈ ಮತ್ತು ಚೆನ್ನೈನಲ್ಲಿ, ಇದು ಕ್ರಮವಾಗಿ ರೂ 2,205 ಮತ್ತು 2,406 ಬೆಲೆಗೆ ಮಾರಾಟವಾಗುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss