Tuesday, September 17, 2024
spot_img
More

    Latest Posts

    ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ – ಇಬ್ಬರ ಬಂಧನ

    ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಯನಾ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.

    ಬೆಂಗಳೂರಿನ  ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪ್ರೇಮಿಗಳ ವಿಡಿಯೋ ಸೆರೆ ಹಿಡಿದು ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಂಗಳೂರು ಶೆಟ್ಟಿ ಲಂಚ್ ಹೋಮ್ ಪಾರ್ಟ್​ನರ್  ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯಲಾಗಿದೆ.

    ಪ್ರೇಮಿಗಳಿಗೆ ರೂಮ್ ವ್ಯವಸ್ಥೆ ಮಾಡಿಕೊಟ್ಟು ಇದೀಗ ಅವರೇ ಲವರ್ಸ್ ಖಾಸಗಿ ವಿಡಿಯೋ ಇಟ್ಟುಕೊಂಡು ಲಕ್ಷ ಲಕ್ಷಣ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಗೆ ಇಳಿದಿದ್ದರು. ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್ ನೀಡಲಾಗಿತ್ತು.

     ಆದ್ರೆ, ರೂಮ್ ನಲ್ಲಿ ರಹಸ್ಯವಾಗಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು. ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬ0ಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.

    ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್ ಗೆ ನಯನಾ ಸಂಬ0ಧಿ ಯುವತಿ ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು.

     ಈ ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಗೆ ಆರೋಪಿ ಕಿರಣ್, ವಾಟ್ಸಪ್ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ.

     ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ. ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss