ಕಾಪು: ತೀರ್ಥಹಳ್ಳಿಯಿಂದ ಮಂಗಳೂರು ಕಡೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದರ ಟೈರ್ ಸ್ಪೋಟಗೊಂಡು ಮರದ ದಿಮ್ಮಿ ಸಮೇತ ಲಾರಿ ಹೊತ್ತಿ ಉರಿದ ಘಟನೆ ಗುರುವಾರ ತಡಾ ರಾತ್ರಿ ಕಾಪು ದಂಡ ತೀರ್ಥ ಮಠದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿನಡೆದಿದೆ.
ಘಟನೆಯಿಂದಾಗಿ ಲಾರಿಯ ಹಿಂಭಾಗ ಟಯರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮರದ ದಿಮ್ಮಿಗಳು ಕೂಡ ಬೆಂಕಿಗೆ ಆಹುತಿಯಾಗಿದೆ.ಕೂಡಲೇ ಕಾರ್ಯಪ್ರವೃತರಾದ ಕಾಪು ಪೊಲೀಸರು ಅಗ್ನಿಶಾಮಕ ದಳಕ್ಕೆ ಸಂಪರ್ಕಿಸುವ ಮುಖೇನ ಬಾರಿ ಅನಾಹುತ ತಪ್ಪಿಸಿದ್ದಾರೆ.
