ಶಿವಮೊಗ್ಗ : ಆಗುಂಬೆ ಘಾಟಿಯಲ್ಲಿ ಇಂದು ಲಾರಿ ಟೈರ್ ಸ್ಫೋಟಗೊಂಡ ಕಾರಣ ಘಾಟಿಯಲ್ಲಿ ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಯಿತು. ಘಾಟಿಯ 8ನೇ ತಿರುವಿನಲ್ಲಿ ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಫೋಟಗೊಂಡು ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕ್ಕಕ್ಕೆ ತಳ್ಳಿದ್ದರಿಂದ, ವಾಹನಗಳು ಕೊಂಚ ಸುಗಮವಾಗಿ ಸಂಚರಿಸಲು ಅವಕಾಶವಾಗಿತ್ತು. ಇನ್ನು ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ವಾಹನಗಳು ಸುಗಮವಾಗಿ ಸಂಚಾರ ನಡೆಸಿದವು.
