ಪುಂಜಾಲಕಟ್ಟೆ: ಇಲ್ಲಿನ ಶ್ರೀ ರಾಮ ನಗರ ಪ್ರಗತಿ ಹಾರ್ಡ್ ವೇರ್ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಲಾರಿ ಮತ್ತು ಪಿಕಪ್ ಢಿಕ್ಕಿ ಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಪಿಕಪ್ ಚಾಲಕ ಗಾಯಗೊಂಡಿದ್ದು ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ಇದೇ ಜಾಗದಲ್ಲಿ ಮೊನ್ನೆಯಷ್ಟೆ ಪಿಕಪ್ ಹಾಗೂ ಮಿನಿ ಲಾರಿ ಢಿಕ್ಕಿಯಾಗಿ ಓರ್ವರು ಸಾವನ್ನಪ್ಪಿದ್ದರು. ರಾಷ್ಟ್ರೀಯ ಹೆದ್ದಾರಿ ಯಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದ್ದು, ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.