ನೆಲ್ಯಾಡಿ: ಮಿನಿ ಲಾರಿಯೊಂದಕ್ಕೆ ಘನ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು ಈ ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಸಮೀಪ ನಡೆದಿದೆ. ಮೃತಪಟ್ಟವರು ಹಾಸನ ನಿವಾಸಿಗಳು ಎಂದು ತಿಳಿದುಬಂದಿದೆ. ಮಿನಿ ಲಾರಿ ಹಾಸನದಿಂದ ಮಂಗಳೂರಿಗೆ ಬರುತ್ತಿತ್ತು. ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪ ಮಿನಿ ಲಾರಿಗೆ ಯಾವುದೋ ಘನ ವಾಹನ ಡಿಕ್ಕಿ ಯಾಗಿ ಪರಾರಿಯಾಗಿದೆ. ಘಟನೆಯಲ್ಲಿ ಮಿನಿ ಲಾರಿ ಸಂಪೂರ್ಣ ಜಖಂ ಗೊಂಡಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
©2021 Tulunada Surya | Developed by CuriousLabs