ಕಾರವಾರ: ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಏಡಿಯೊಂದು ಪತ್ತೆಯಾಗಿದೆ.
ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಏಡಿಯ ಕುರಿತಾದ ಮಾಹಿತಿ ಸಂಗ್ರಹಿದ್ದಾರೆ. ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನು ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಈ ವಿಶೇಷ ಏಡಿಯೂ ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಪಟ್ಟೆ ಬಲೆಗೆ ಸಿಕ್ಕಿ ಬಿದ್ದಿದೆ.
