Sunday, July 3, 2022

ಮಂಗಳೂರು : ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲವೃತ

ಮಂಗಳೂರು : ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲೇ ನೀರು ನಿಂತಿದ್ದು,...
More

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    ಮಂಗಳೂರು: ಜೂ.25ರಂದು ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ – ನ್ಯಾ. ರವೀಂದ್ರ ಎಂ ಜೋಷಿ

    ಮಂಗಳೂರು:ಮುಂಬರುವ ಜೂನ್ 25ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಅದರ ಅಂಗವಾಗಿ ಜಿಲ್ಲೆಯ ನಾಗರೀಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ರವೀಂದ್ರ ಎಂ. ಜೋಶಿ ಅವರು ತಿಳಿಸಿದರು.

    ಅವರು ನಗರದ ನ್ಯಾಯಾಲಯಗಳ ಸಂಕಿರ್ಣದಲ್ಲಿ ಮೇ. 27 ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜೂನ್ 25ರ ನಾಲ್ಕನೇ ಶನಿವಾರ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗುವಂತಹ ಪ್ರಕರಣಗಳು ತೀರ್ಮಾನ ವಾಗುವುದರಿಂದ ಬಾಂಧವ್ಯಗಳು ಉಳಿದು ವಿವಾದವು ತೀರ್ಮಾನವಾಗುತ್ತದೆ, ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರುಪಾವತಿಸಲಾಗುವುದು, ಮುಖ್ಯವಾಗಿ ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿದೆ,
    ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟಾರೆ 52,238 ಪ್ರಕರಣಗಳು ಬಾಕಿ ಉಳಿದಿವೆ, ಅವುಗಳಲ್ಲಿ 4040 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣಗಳು ಎಂದು ಇದುವರೆಗೂ ಗುರುತಿಸಲಾಗಿದೆ, ಅವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಕೆಲವೊಂದು ರಾಜಿಯಾಗಲ್ಲ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲು ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ಶುಲ್ಕಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಹಾಗೂ ಪಿಂಚಣಿ ಪ್ರಕರಣಗಳು, ಸಾರ್ವಜನಿಕ ಉಪಯುಕ್ತತೆ ಸೇವೆಗಳ ಸಂಬಂಧಿಸಿದ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಹಾಗೂ ಇತರೆ ಪ್ರಕರಣಗಳು, ವಿಚ್ಛೇದನ ಹೊರತುಪಡಿಸಿದಂತೆ ಕೌಟುಂಬಿಕ ಹಾಗೂ ವೈವಾಹಿಕ ನ್ಯಾಯಾಲಯದ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿ ಕೊಳ್ಳಬಹುದಾಗಿದೆ ಎಂದು ಅವರು ವಿವರ ನೀಡಿದರು.ಪೋಕ್ಸೋ-1ರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ಮಧುಕರ್ ಭಾಗವತ್ ಗೋಷ್ಠಿಯಲ್ಲಿದ್ದರು.

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    Don't Miss

    KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :ಬಸ್ ಪಾಸ್ ಅವಧಿ ವಿಸ್ತರಣೆ

    ಬೆಂಗಳೂರು: 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ...

    ಮಂಗಳೂರು: ಪಂಪ್‌ವೆಲ್‌ನಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಸಂಚಾರಕ್ಕೆ ಅಡಚಣೆ

    ಮಂಗಳೂರು: 5 ದಶಕಕ್ಕೂ ಹಳೆಯದಾದ ನೀರಿನ ಪೈಪ್‌ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್‌ವೆಲ್‌ ಜಂಕ್ಷನ್‌ ಬಳಿ ಮಧ್ಯಾಹ್ನ ವೇಳೆ ನಡೆದಿದೆ.

    ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

    ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು. 70 ರ ದಶಕಗಳಲ್ಲಿ ವರಿಂದರ್...

    ಉತ್ತಮ ಆರೋಗ್ಯಕ್ಕಾಗಿ ಬ್ರೌನ್‌ ರೈಸ್‌ ಸೇವಿಸಿ, ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರವಿದು

    ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ ರೈಸ್‌...

    ಮಂಗಳೂರು: ಸಿಎನ್‍ಜಿ ಬೆಲೆ ಇಳಿಕೆಗೆ ಕೋರಿ ಮನವಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

    ಮಂಗಳೂರು:ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ...