ಕಿನ್ನಿಗೋಳಿ: ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಉತ್ತಮ ಸಾಹಿತ್ಯ ಹುಟ್ಟಬೇಕು, ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯಕ್ಕೆ ಜನರ ಮನಸ್ಸನ್ನು ತಟ್ಟುವ ಮುಟ್ಟುವ ಶಕ್ತಿಇದೆ ಎಂದು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹೇಳಿದರು.
ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಮೂಲ್ಕಿ ತಾಲೂಕು ಘಟಕ, ಕಿನ್ನಿಗೋಳಿಯ ಯುಗಪುರುಷ ಹಾಗೂ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಜಂಟಿ ಸಂಯೋಜನೆಯಲ್ಲಿ ನಡೆದ ಪ್ರಪ್ರಥಮ ಮೂಲ್ಕಿ ತಾಲೂಕಿನ ಸಾಹಿತ್ಯೋತ್ಸವ 2023ರ ಪ್ರಶಸ್ತಿ-ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾಶ್ರೀ ಪ್ರಶಸ್ತಿಯನ್ನು ಕಟೀಲು ಫ್ರೌಢಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ, ಸೇವಾಶ್ರೀ ಪುರಸ್ಕಾರವನ್ನು ಪಡುಪಣಂಬೂರು ಗ್ರಾ.ಪಂ.ನ ಅಧ್ಯಕ್ಷೆ ಮಂಜುಳಾ ಹೊಗೆಗುಡ್ಡೆ, ಸೇವಾಶ್ರೀ ಪುರಸ್ಕರ ಸಮಾಜ ಸೇವಕ ಜೈಕೃಷ್ಣ ಕೋಟ್ಯಾನ್ ಹಳೆಯಂಗಡಿ, ಕಲಾಶ್ರೀ ಪ್ರಶಸ್ತಿ ಯುವ ರಂಗಕರ್ಮಿ ರಜತ್‌ಕುಮಾರ್ ಸಸಿಹಿತ್ಲು, ಕಲಾಶ್ರೀ ಪುರಸ್ಕಾರವನ್ನು ತೋಕೂರು ತಪೋವನ ನಿಟ್ಟೆ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ಕಿನ್ನಿಗೋಳಿ ಹಾಗೂ ಪಡುಪಣಂಬೂರು ಗ್ರಾ.ಪಂ.ನ ನಿಕಟ ಪೂರ್ವ ಕಾರ್ಯದರ್ಶಿ ಲೋಕನಾಥ ಭಂಡಾರಿ, ನಿವೃತ್ತ ಅಂಚೆ ಪಾಲಕ ಶಂಕರ ಬಂಗೇರ ಕಾಪಿಕಾಡು ಅವರನ್ನು ವಿಶೇಷ ಗೌರವ ಪುರಸ್ಕಾರದಡಿಯಲ್ಲಿ ಗೌರವಿಸಲಾಯಿತು.

ಪುತಿಭಾ ಪುರಾಸ್ಕರವನ್ನು ಪ್ರತಿಭಾವಂತ ವಿದ್ಯಾರ್ಥಿಗಳಾದ ದೀಕ್ಷಾ ಆರ್, ಅಶ್ವಿತ್ ಜೆ. ಆಚಾರ್ಯ, ವಿಧಿ ಯು. ಕುಲಾಲ್, ದಿಶಾ ಹಾಗೂ ಪೂಜಾ ಅವರನ್ನು ವಿಶೇಷವಾಗಿ ನಗದು, ಪುರಸ್ಕಾರ ಸಹಿತ ಗೌರವಿಸಲಾಯಿತು.
ದ. ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆಯನ್ನು ವಹಿಸಿ, ಸಾಹಿತ್ಯ ಕಾರ್ಯಕ್ರಮವು ಅಮೂಲ್ಯವಾಗಿದೆ. ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದರು.
ಸಮಾಜ ಸೇವಕಿ ಶಾಂಭವಿ ಶೆಟ್ಟಿ ನಿಡ್ಡೋಡಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಕಿನ್ನಿಗೋಳಿ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಮೂಲ್ಕಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಶಿವರಾಮ್ ಜಿ. ಅಮೀನ್, ತೋಕೂರು ಸುಬ್ರಹ್ಮಣ್ಯ ಸೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೋಹನ್‌ದಾಸ್, ಸ್ಪೋರ್ಟ್ಸ್ ಕ್ಲಬ್‌ನ ಮಹಿಳಾ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಶೋಭಾ ವಿ. ಅಂಚನ್ ಮತ್ತಿತರಿದ್ದರು.
ಮೂಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ನರೇಂದ್ರ ಕೆರೆಕಾಡು ಅವರ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಘೋಷಿಸಿದರು.
ಹಿರಿಯ ಕವಿ ಉದಯಕುಮಾರ ಹಬ್ಬು ಅವರ ಅಧ್ಯಕ್ಷತೆಯಲ್ಲಿ ಬಹುಭಾಷ ಕವಿ ಗೋಷ್ಟಿ ನಡೆಯಿತು. ಕವಿಗಳಾಗಿ ಯಶೋಧರ ಕೊಟ್ಯಾನ್, ಜೊಸ್ಸಿ ಪಿಂಟೋ, ರೆನಿಶಾ ಡಿಸೋಜಾ ಕಟೀಲು, ದಯಾಮಣಿ ಎಕ್ಕಾರು, ಕೃಷ್ಣಾನಂದ ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ರೇಖಾ ನಾರಾಯಣ್ ಸುರತ್ಕಲ್, ದಿಯಾ ಉದಯ್ ಡಿ.ಯು. ಅವರು ಭಾಗವಹಿಸಿ ಕವನ ವಾಚಿಸಿದರು. ಗೀತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಮೂಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು ಸ್ವಾಗತಿಸಿದರು, ಸನ್ಮಾನ ಪತ್ರವನ್ನು ನೀಮಾ ಹಳೆಯಂಗಡಿ, ಸಂಪತ್ ದೇವಾಡಿಗ, ಸಂತೋಷ್‌ಕುಮಾರ್, ದೀಪಕ್ ಸುವರ್ಣ, ಜಗದೀಶ್ ಕುಲಾಲ್, ಸುರೇಖಾ, ಸುನಿಲ್ ದೇವಾಡಿಗ, ಗಣೇಶ್ ಆಚಾರ್ಯ, ಗಣೇಶ್ ದೇವಾಡಿಗ, ವಾಣಿ ಮಹೇಶ್, ಸುಜಾತಾ ಜಿ.ಕೆ. ಚಂದ್ರಹಾಸ ಸುವರ್ಣ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ದೇವಾಡಿಗ ವಂದಿಸಿದರು. ಕ್ಲಬ್‌ನ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್‌ಕುಮಾರ್ ಬೇಕಲ್ ಹಾಗೂ ಕ್ಲಬ್‌ನ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಾಡೋಣ ಬನ್ನಿ/ಕುಣಿಯೋಣ ಬನ್ನಿ
ಫಲಿತಾಂಶ:
ಹಾಡೋಣ ಬನ್ನಿ :
ಪ್ರಕಾಶ್ ಆಚಾರ್ಯ ಕಿನ್ನಿಗೋಳಿ(ಪ್ರ), ಹರಿಪ್ರಸಾದ್ ಚೆಳ್ಯಾರು (ದ್ವಿ), ತೇಜಶ್ರೀ ಪಿ. ಮಂಗಳೂರು (ತೃ), ಸಮಾಧಾನಕರ : ಪ್ರಿಯಾ ಕೈಕಂಬ-ಪೆರಾರ, ಸುನಿಲ್‌ಕುಮಾರ್ ಅಂಬಲಪಾಡಿ, ತುಳಸಿ ಕಾಟಿಪಳ್ಳ, ಶ್ರೀಯಾ ಆದಿ ಉಡುಪಿ, ಪ್ರಭಾವತಿ ನಾಯಕ್ ಹಿರಿಯಡ್ಕ ಹಾಗೂ ಕಿಶನ್‌ಕುಮಾರ್ ಮಣ್ಣಗುಡ್ಡೆ(ಹಾಡಿನ ರಾಜ), ಅನನ್ಯ ನಾರಾಯಣ್ ಮಂಗಳೂರು (ಹಾಡಿನ ರಾಣಿ)
ಕುಣಿಯೋಣ ಬನ್ನಿ :
ಚಾರ್ವಿ ಎಸ್. ದೇವಾಡಿಗ ಮುಕ್ಕ (ಪ್ರ), ವೈಭವಿ ವಿ.ಎಸ್. ಬೆಂಜನಪದವು, ಬಂಟ್ವಾಳ (ದ್ವಿ), ಅಪೂರ್ವ ನಾಯ್ಕ್ ಕಾರ್ಕಳ (ತೃ), ಸಮಾಧಾನಕರ : ಚಾರ್ವಿ ವಿದ್ಯಾಧರ ಸುವರ್ಣ ನಿಡ್ಡೋಡಿ, ದೀಪ್ತಿ ಸಾಲ್ಯಾನ್ ಹೆಜ್ಮಾಡಿ, ಆರಾಧ್ಯ ರಾಜೇಶ್ ಪೂಜಾರಿ ಮೂಡಬಿದಿರೆ, ಆಶಿಕಾ ಎಕ್ಕಾರು, ಸೌಮ್ಯಶ್ರೀ ಕುಕ್ಕಟ್ಟೆ, ಕೊಲ್ಲೂರು ಹಾಗೂ ಧನುಷ್ ಕಾಟಿಪಳ್ಳ (ನೃತ್ಯ ರಾಜ), ತನ್ವಿ ಇ. ಕೋಟ್ಯಾನ್ ಬೈಕಂಪಾಡಿ (ನೃತ್ಯ ರಾಣಿ)
