Monday, July 22, 2024
spot_img
More

  Latest Posts

  ಮಂಗಳೂರು: ಅರ್ಧದಲ್ಲಿಯೆ ಸ್ಥಗಿತಗೊಂಡ ಅಪಾರ್ಟ್ಮೆಂಟ್ ಲಿಫ್ಟ್ – ಅಗ್ನಿಶಾಮಕ ದಳದಿಂದ ಐವರ ರಕ್ಷಣೆ

  ಮಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಲಿಫ್ಟ್ ಕೆಟ್ಟು ಅರ್ಧದಲ್ಲಿಯೆ ಸ್ಥಗಿತಗೊಂಡಿದ್ದು, ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಐವರನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ನಗರದ ಬೆಂದೂರಿನಲ್ಲಿರುವ ಶಿಲ್ಪಾ ಪ್ಯಾಲೇಸ್ ಎಂಬ ಅಪಾರ್ಟ್ಮೆಂಟ್ ನಲ್ಲಿ ಸಂಜೆ 6.30ರ ವೇಳೆಗೆ ನಡೆದಿದೆ‌. ಐವರು ಯುವಕರು ಲಿಫ್ಟ್ ನಿಂದ ಮೇಲಿನ ಮಹಡಿಗೆ ಹೋಗುತ್ತಿದ್ದರು. ಆದರೆ ಲಿಫ್ಟ್ ಒಂದನೇ ಮಹಡಿಯ ಮೇಲೆ ಹೋಗಿ ಸ್ಥಗಿತಗೊಂಡಿದೆ. ಪರಿಣಾಮ ಲಿಫ್ಟ್ ನೊಳಗಿದ್ದ ಐವರು ಬಂಧಿಯಾಗಿದ್ದರು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಒಂದನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಲಿಫ್ಟ್ ಅನ್ನು ಮೂರನೇ ಮಹಡಿಯ ಮೇಲೆ ಎಳೆದು ತಂದಿದ್ದಾರೆ. ಈ ಮೂಲಕ ಐವರು ಯುವಕರನ್ನು ರಕ್ಷಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss