Friday, April 19, 2024
spot_img
More

    Latest Posts

    ಪುಂಜಾಲಕಟ್ಟೆಯ ಪರಿಸರದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಜನತೆಯಲ್ಲಿ ಭಯ ಹುಟ್ಟಿಸುತ್ತಿರುವ ಚಿರತೆ

    ಪುಂಜಾಲಕಟ್ಟೆಯ ದುಗ್ಗಮಾರ ಗುಡ್ಡೆ, ಮಜಲೋಡಿ ಮತ್ತು ನಾಕುನಾಡು ಪರಿಸರದಲ್ಲಿ 2 ತಿಂಗಳ ಹಿಂದೆ ಕಾಣಿಸಿಕೊಂಡು ನಾಯಿ ,ಕೋಳಿ ಗಳನ್ನು ಕೊಂದು ತಿಂದು ಜನತೆಯಲ್ಲಿ ಭಯ ಮೂಡಿಸಿದ್ದ ಚಿರತೆಯು ಇದೀಗ ಮತ್ತೆ ಈ ಪರಿಸರದಲ್ಲಿ ಕಾಣಿಸಿಕೊಂಡು ಜನತೆಯಲ್ಲಿ ಭೀತಿ ಮೂಡಿಸಿದೆ.

    ಈ ಬಗ್ಗೆ ಈ ಹಿಂದೆಯೂ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದ್ದು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಪುಂಜಾಲಕಟ್ಟೆಯ ನಾಕುನಾಡಿನ ಪುರುಷೋತ್ತಮ್ ಪೂಜಾರಿಯವರ ಕರುವನ್ನು ಕೊಂದು ತಿಂದಿದ್ದು,ಅದರ ಅರೆ ಬರೆ ದೇಹ ಪಕ್ಕದ ಗುಡ್ಡದಲ್ಲಿ ಪತ್ತೆಯಾಗಿದ್ದು ಈ ಪರಿಸರದ ಜನರಲ್ಲಿ ಅತೀವ ಭಯ ಆವರಿಸಿಕೊಂಡಿದೆ.

    ಈ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತುಂಗಪ್ಪ ಬಂಗೇರ ರು ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಚಿರತೆಯನ್ನು ಹಿಡಿದು ಜನರ ಭಯಭೀತಿಯನ್ನು ನಿವಾರಿಸಲು ಕ್ರಮ ವಹಿಸಬೇಕೆಂದು ದೂರವಾಣಿ ಮುಖೇನ ಆಗ್ರಹ ಮಾಡಿಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss