Saturday, October 12, 2024
spot_img
More

    Latest Posts

    ಗ್ರಾಹಕರೇ ಗಮನಿಸಿ : ‘2000’ ಮುಖಬೆಲೆ ನೋಟು ವಾಪಸ್ ಗೆ ಇಂದು ಕಡೆ ದಿನ

    ನವದೆಹಲಿ : 2000 ವಾಪಸ್ ಗೆ ಇಂದು ಕಡೆಯ ದಿನವಾಗಿದ್ದು, ಇಂದು ಗ್ರಾಹಕರು ಬ್ಯಾಂಕುಗಳಿಗೆ ತೆರಳಿ 2,000 ನೋಟುವನ್ನು ಬದಲಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.

    ಕಳೆದ ಮೇನಲ್ಲಿ ಆರ್‌ಬಿಐ 2000 ನೋಟು ಚಲಾವಣೆಯನ್ನು ಹಿಂಪಡೆದಿತ್ತು.

    ಬ್ಯಾಂಕಿಗೆ ಹಿಂತಿರುಗಿಸಲು ನೀಡಿದ್ದ ಮೂರು ತಿಂಗಳ ಗಡವು ಇಂದು ಅಂತ್ಯವಾಗಲಿದೆ. ಆದ್ದರಿಂದ 2000 ಮುಖಬೆಲೆ ನೋಟು ಪಡೆಯಲು ಇವತ್ತೇ ಕೊನೆಯ ದಿನವಾಗಿದ್ದರಿಂದ ಬ್ಯಾಂಕಿಗೆ ತೆರಳಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.

    ನವೆಂಬರ್ 2016 ರಲ್ಲಿ ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 24 (1) ರ ಅಡಿಯಲ್ಲಿ ರೂ. 500 ಮತ್ತು 1000 ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ಆರ್ಥಿಕತೆಯ ಕರೆನ್ಸಿ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರವು ರೂ.2000 ನೋಟನ್ನು ಪರಿಚಯಿಸಿತು.

    2000 ರೂ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನವು ಮಾರ್ಚ್ 2017 ಕ್ಕಿಂತ ಮೊದಲು ಬಿಡುಗಡೆಯಾಗಿದೆ. ಇತರ ಮುಖಬೆಲೆಯ ನೋಟುಗಳು ಪ್ರಸ್ತುತ ದೇಶದ ಜನರ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಈ ಕಾರಣಕ್ಕಾಗಿಯೇ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ‘ಕ್ಲೀನ್ ನೋಟ್ ಪಾಲಿಸಿ’ ಪ್ರಕಾರ ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss