ಮಂಗಳೂರು : ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರು ತಮ್ಮ ಬೆಲೆಬಾಳುವ ವಸ್ತುಗಳ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಕಾರಣವೇನೆಂದರೆ ನವೆಂಬರ್ 29ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ ರಾಘವೇಂದ್ರ ಮಯ್ಯ ಎಂಬವರ ಬ್ಯಾಗ್ ನಲ್ಲಿದ್ದ ಸುಮಾರು 30 ಸಾವಿರ ಮೌಲ್ಯದ ಲ್ಯಾಪ್ ಟಾಪ್ ನಾಪತ್ತೆಯಾಗಿದೆ! ಹೌದು, ಅವರು ತನ್ನ ಬ್ಯಾಗ್ ನಲ್ಲಿ ಲ್ಯಾಪ್ ಟಾಪ್ ಇಟ್ಟಿದ್ದು, ಮಾರನೇ ದಿನ ಬೆಳಗ್ಗೆ ಬೆಂಗಳೂರಿನಲ್ಲಿ ಬಸ್ ಇಳಿದು, ಮನೆಗೆ ಹೋಗಿ ನೋಡುವಾಗ ಅವರ ಲ್ಯಾಪ್ ಟಾಪ್ ಕಾಣೆಯಾಗಿತ್ತು! ಲ್ಯಾಪ್ ಟಾಪ್ ಬದಲಿಗೆ ಅಷ್ಟೇ ಭಾರವಿರುವ ಪುಸ್ತಕ ಬ್ಯಾಗ್ ನೊಳಗಿತ್ತು. ಈ ಬಗ್ಗೆ ರಾಘವೇಂದ್ರ ಮಯ್ಯ ಬೆಂಗಳೂರಿನ ಆರ್ ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ.
©2021 Tulunada Surya | Developed by CuriousLabs