ಸುಳ್ಯ : ಖ್ಯಾತ ಭಾಷಾ ವಿಜ್ಞಾನಿ ಹಾಗೂ ಸಾಹಿತಿ ಪ್ರೊ| ಕೋಡಿ ಕುಶಾಲಪ್ಪ ಗೌಡರು ಇಂದು ರಾತ್ರಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಪುತ್ತೂರಿನಲ್ಲಿ ಮಗಳ ಮನೆಯಲ್ಲಿ ಇದ್ದ ಅವರನ್ನು ತೀವ್ರ ಅಸೌಖ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ 10.30 ರ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ಅವರ ಮನೆಗೆ ತರಲಾಗುವುದೆಂದು ತಿಳಿದುಬಂದಿದೆ. ಪ್ರೊ. ಕೋಡಿ ಕುಶಾಲಪ್ಪ ಗೌಡರು 30.05.1931ರಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜನಿಸಿದರು. ಮದ್ರಾಸಿನ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಸ್ನಾಕೋತ್ತರ ಪದವಿ ಪಡೆದು ಗ್ರಾಮೀಣ ಭಾಷೆಗಳಾದ, ಅರೆಭಾಷೆ, ಕೊಡವ ಭಾಷೆ ಹಾಗೂ ತುಳು ಭಾಷೆಗಳ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದರು.
