ಕುಂದಾಪುರ: ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಕೇರಳದಿಂದ ಕೊಲ್ಲೂರಿಗೆ ಬಂದಿದ್ದ ಯಾತ್ರಾರ್ಥಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೇರಳ ಕೋಯಿಕೋಡ್ ಜಿಲ್ಲೆ ಉಳ್ಳೂರು ತಾಲೂಕು ಮುತ್ತೋಟ್ ಕೂಯಿಲಾಂಡಿ ಕುನ್ನಂತ್ತೂರು ನಿವಾಸಿ ವಿನೋದ್(54) ಮೃತರು. ವಿನೋದ್ ಪತ್ನಿ ಜೊತೆ ಕೊಲ್ಲೂರಿಗೆ ಬಂದು ವಸತಿಗೃಹದಲ್ಲಿ ತಂಗಿದ್ದರು.
ದೇವಸ್ಥಾನದ ಒಳಗಡೆ ಹೊರಾಂಗಣದಲ್ಲಿ ರಥೋತ್ಸವದ ಕಾರಣ ದೇವರ ಕಾರ್ಯಕ್ರಮ ನಡೆಯುತ್ತಿದ್ದಾಗ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ವಿನೋದ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.