ಉಳ್ಳಾಲ: ಶ್ರೀ ಬಾಲಕೃಷ್ಣ ಮಂದಿರ (ರಿ.) ಕುಂಪಲ ಇದರ ರಜತ ಪರ್ವದ ಸಮಾರೋಪ ಸಮಾರಂಭ “ಕುಂಪಲೋತ್ಸವ 2022” ಅದ್ದೂರಿಯಾಗಿ ಕುಂಪಲದಲ್ಲಿ ನಡೆಯಿತು.
“ಸುಧರ್ಮ ಸಭೆ” ಸಭಾ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ಮೂಡುಬಿದಿರೆ ಉದ್ಘಾಟಿಸಿದರು.

ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಹಾಗೂ ಗುರುಪುರ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಯತಿದ್ವಯರ ಆಶೀರ್ವಚನದಿಂದ ಸಭೆ ಪಾವನಗೊಂಡಿತು.

ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು ಶುಭಾ ಶಂಸನೆಗೈದರು. ಈ ಸಂದರ್ಭದಲ್ಲಿ ಮಂದಿರದ ವತಿಯಿಂದ ಮಾನ್ಯ ಸಚಿವರನ್ನು ಆದರಪೂರ್ವಕ ಸನ್ಮಾನಿಸಲಾಯಿತು.

ಕಳೆದ 25 ವರ್ಷಗಳಿಂದ ಶ್ರೀ ಬಾಲಕೃಷ್ಣ ಮಂದಿರದ ಮುಂದಾಳತ್ವವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿರುವ ಮಂದಿರದ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲರವರನ್ನು ಮಂದಿರದ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಕಳೆದ 25 ವರ್ಷಗಳಿಂದ ನಡೆದು ಬಂದಂತಹ ಮಂದಿರದ ಕಾರ್ಯ ಚಟುವಟಿಕೆಯನ್ನು ಮೆಲುಕು ಹಾಕಿ ನೆನಪು ಮಾಡಿದರು.


ವೇದಿಕೆಯಲ್ಲಿ ಅತಿಥಿ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಶ್ರೀ ಕೆ. ಟಿ. ಸುವರ್ಣ, ಡಾl ಸುರೇಖಾ ಶೆಟ್ಟಿ ಮುಡಿಪು, ಉದ್ಯಮಿ ಲಯನ್ ರಾಧಾಕೃಷ್ಣ ರೈ ಉಮಿಯಾ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಕೆ., ಉದ್ಯಮಿ ಶ್ರೀ ರವೀಂದ್ರ ಆಳ್ವ ಕುವೆತ್ತಬೈಲ್, ಶ್ರೀ ಮಂಜುನಾಥ ಆಳ್ವ ತೇವುನಾಡುಗುತ್ತು ಮಂಜ ನಾಡಿ, ಜ್ಞಾನರತ್ನ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಭಾಸ್ಕರ್ ದೇವಸ್ಯ, ನಿಡ್ಡೋಡಿ, ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಸೀತಾರಾಮ ಶೆಟ್ಟಿ ದಡಸ್, ಶ್ರೀ ಮೋಹನ್ ಮೆಂಡನ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ಕುಂಪಲ, ಶ್ರೀ ಬಾಲಕೃಷ್ಣ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಶೀಲಾ ದೇವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.


ಕುಂಪಲ ಚೇತನ ನಗರದ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಬಳಿಯಿಂದ ಸಾಯಂಕಾಲ “ಕೇಸರಿ ಪೇಟ” ಧರಿಸಿ, ಭಾಗವಹಿಸಿದ ಮಕ್ಕಳು, ಮಹಿಳೆಯರು, ಪುರುಷರು, ಭಜನಾ ತಂಡಗಳು, ತುಳುನಾಡ ಸಂಸ್ಕೃತಿ ಬಿಂಬಿಸುವ ಹುಲಿ ವೇಷಧಾರಿ ಚಿಣ್ಣರು, ಕೀಲು ಕುದುರೆ, ಯಕ್ಷಗಾನ ಆಕೃತಿಯ ಟ್ಯಾಬ್ಲೊ ಮುಂತಾದ ವಿವಿಧ ಕಲಾ ಪ್ರಕಾರದ ವಿಜೃಂಭಣೆಯ ಶೋಭಾ ಯಾತ್ರೆ ಆರಂಭಗೊಂಡು ಮೂರು ಕಟ್ಟ ಮೈದಾನದವರೆಗೆ ಸಾಗಿ, ಕುಂಪಲ ಪರಿಸರದಲ್ಲಿ ಕೇಸರಿಮಯ ವಾತಾವರಣ ಸೃಷ್ಟಿ ಮಾಡಿತು.




