ಶ್ರೀ ಬಾಲಕೃಷ್ಣ ಮಂದಿರ (ರಿ) ಕುಂಪಲ ರಜತ ಪರ್ವದ “ಕುಂಪಲ ಉತ್ಸವ” ಡಿ.17 ರಂದು ನಡೆಯಲಿದೆ.
ಉತ್ಸವದ ವೈಭವದ ಕಲಾ ಪ್ರಕಾರದ ಶೋಭಾಯಾತ್ರೆ ಸಂಜೆ 4.30ಕ್ಕೆ ಕುಂಪಲ ಶಾಲಾ ಮೈದಾನದಿಂದ ತೆರಳಲಿದೆ.
ಈ ಶೋಭಾಯಾತ್ರೆಯಲ್ಲಿ ಮಾಣಿಲದ ಶ್ರೀ ಶ್ರೀ ಮೊಹನದಾಸ ಸ್ವಾಮಿ ಹಾಗೂ ವಜ್ರದೇಹಿ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.
ಅದೇ ರೀತಿ ಸಂಜೆ 6 ಗಂಟೆಗೆ ರಜತ ಪರ್ವ ಸಮಾರೋಪ “ಸುದರ್ಮ ಸಭೆ” ನಡೆಯಲಿದೆ.
ರಾತ್ರಿ 7.30 ಕ್ಕೆ ಅತ್ಯಾಕರ್ಷಕ ಮನರಂಜನಾ ಕಾರ್ಯಕ್ರಮ ಜರುಗಲಿದೆ.
ರಾತ್ರಿ 8 ಗಂಟೆಗೆ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಸೇವಾ ಸಮಿತಿ ಸದಸ್ಯೆಯರು ಅಭಿನಯಿಸುವ ಶ್ರೀ ‘ಸತ್ಯನಾಪುರತ ಸಿರಿ’ ತುಳು ಚಾರಿತ್ರಿಕ ನಾಟಕ ಹಾಗೂ ರಾತ್ರಿ 9.ಗಂಟೆಗೆ ಲಯನ್ ಕಿಶೋರ್ ಡಿ.ಶೆಟ್ಟಿ ನಿರ್ಮಾಣ ಮತ್ತು ನಿರ್ದೇಶನದ ಶ್ರೀಲಲಿತೆ ಕಲಾವಿದರಿಂದ ‘ಗರುಡ ಪಂಚಮಿ’ ರೋಮಾಂಚನಕಾರಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸತೀಶ್ ಕುಂಪಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
