Tuesday, September 17, 2024
spot_img
More

    Latest Posts

    ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಶಾರೀಖ್ ಗೆ ಕೊರಿಯರ್ ಮೂಲಕ ಬರ್ತಿತ್ತು ಬಾಂಬ್ ತಯಾರಿಸುವ ಸಾಮಾಗ್ರಿ: ಸ್ಪೋಟಕ ಮಾಹಿತಿ ಬಯಲು

    ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಕುರಿತು ಎನ್ ಐ ಎ ತೀವ್ರ ತನಿಖೆ ನಡೆಸಿದ್ದು, ಹಲವು ಸ್ಪೋಟಕ ಮಾಹಿತಿಗಳನ್ನು ಕಲೆಹಾಕುತ್ತಿದೆ. ಇನ್ನೊಂದೆಡೆ ಶಾರೀಖ್ ಆರೋಗ್ಯದಲ್ಲಿ ಕೂಡ ಚೇತರಿಕೆ ಕಂಡು ಬಂದಿದೆ.

    ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಯಲಾಗಿದ್ದು, ವಿಚಾರಣೆ ಸಮಯದಲ್ಲಿ ಕೇರಳದ ಕೊಚ್ಚಿಯ ಆಲುವಾದ ಕೆಲವು ಲಾಡ್ಜ್ಗಳಲ್ಲಿ ಬಾಂಬ್ ತಯಾರಿಸುತ್ತಿದ್ದ ಎಂದು ಈತ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಎನ್‌ಐಎ ಅಧಿಕಾರಿಗಳು ಮಂಗಳೂರಿನಲ್ಲಿ ಶಾರೀಕ್ನ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲಿನ ಹಲವು ಲಾಡ್ಜ್ಗಳಲ್ಲಿ ತಂಗಿದ್ದ ಶಾರೀಕ್ ಅಲ್ಲಿಗೆ ಕೊರಿಯರ್ ಮೂಲಕ ಬಾಂಬ್ ತಯಾರಿಸುವ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ. ಆತ ಲಾಡ್ಜ್ ಬಿಟ್ಟು ಬಂದ ಬಳಿಕವೂ ಪಾರ್ಸೆಲ್ ಬರುತ್ತಿದ್ದು, ನಂತರ ಲಾಡ್ಜ್ ನವರು ಅವನಿಗೆ ತಲುಪಿಸುತ್ತಿದ್ದರು ಎನ್ನುವ ಶಾಕಿಂಗ್ ಮಾಹಿತಿ ರಿವೀಲ್ ಆಗಿದೆ. ವಿಚಾರಣೆ ಸಮಯದಲ್ಲಿ ಕೇರಳದ ಕೊಚ್ಚಿಯ ಆಲುವಾದ ಕೆಲವು ಲಾಡ್ಜ್ಗಳಲ್ಲಿ ಬಾಂಬ್ ತಯಾರಿಸುತ್ತಿದ್ದ ಎಂದು ಈತ ಬಾಯಿಬಿಟ್ಟಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಕುರಿತು ಎನ್ ಐ ಎ ತೀವ್ರ ತನಿಖೆ ನಡೆಸಿದ್ದು, ಹಲವು ಸ್ಪೋಟಕ ಮಾಹಿತಿ ಕಲೆಹಾಕುತ್ತಿದೆ.

    ಉಗ್ರ ಶಾರೀಕ್ನ ತನಿಖೆ ಮುಂದುವರಿಸಿದ ಎನ್‌ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿದ್ದು, ಇತ್ತೀಚೆಗೆ ಶಾರಿಕ್ ಹಣದ ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಹೆಚ್ಚಿನ ಹಣ ಡಾಲರ್ ಮೂಲಕ ಶಾರಿಕ್ ಅಕೌಂಟ್ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ. ಉಗ್ರ ಶಾರಿಕ್ ಹಣದ ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಹೆಚ್ಚಿನ ಹಣ ಡಾಲರ್ ಮೂಲಕ ಅಕೌಂಟ್ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ. ಮೈಸೂರಿನ ನೂರಾರು ಮಂದಿಯ ಅಕೌಂಟ್ಗೆ ಡಾಲರ್ ಭಾರತೀಯ ಕರೆನ್ಸಿಯಾಗಿ ವರ್ಗಾವಣೆ ಆಗಿದ್ದು 40ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಲಾಗಿತ್ತು. ಶಾರಿಕ್ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss