2022ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧಕರು ಹಾಗು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿತ್ವಗಳಿಗೆ ಶ್ರೀ ಬಾಲಕೃಷ್ಣ ಮಂದಿರ (ರಿ.) ಕುಂಪಲ ವತಿಯಿಂದ ಕೃಷ್ಣಾನುಗ್ರಹ – ಅಭಿನಂದನೆ
ಸನ್ಮಾನ ಕಾರ್ಯಕ್ರಮವು ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಮುಡಿಪು ಗೋವರ್ಧನೋತ್ಸವದ ಅಧ್ಯಕ್ಷರಾದ ಶ್ರೀ ಜಗದೀಶ್ ಆಳ್ವ ಕುವೆತ್ತಬೈಲ್ ಇವರ ಅಧ್ಯಕ್ಷತೆ ವಹಿಸಿದರು.
ರಜತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಜಗದೀಶ್ ಆಚಾರ್ಯ ಶ್ರೀ ಗಣೇಶ ವಂದನಾ ಹಾಗು ಸರಸ್ವತಿ ಸ್ತುತಿಯೊಂದಿಗೆ ಪ್ರಾರ್ಥನಾ ಗೀತೆ ಹಾಡಿದರು.

ಶ್ರೀ ಬಾಲಕೃಷ್ಣ ಮಂದಿರದ ಕಲ್ಪನಾತೀತವಾದ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ರವರು ಸ್ವಾಗತಿಸಿ, ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಯಶವಂತ್ ದೇರಾಜೆ, ಶ್ರೀ ಜಯಂತ್ ಕೊಂಡಾಣ, ಶ್ರೀಮತಿ ವೇದಾವತಿ ಗಟ್ಟಿ, ಮಂದಿರದ ಕೋಶಾಧಿಕಾರಿ ಸೋಮಶೇಖರ್ ಜಗತಾಪ್, ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಮೋಹನ್ ಶೆಟ್ಟಿ ಕುಂಪಲ, ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಮಾಧವ ಬಗಂಬಿಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ ಕುಮಾರ್ ಇಂದಾಜೆ, ಮಹಿಳಾ ಸಮತಿ ಅಧ್ಯಕ್ಷೆ ಶ್ರೀಮತಿ ಸುಶೀಲ ದೇವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶೇಷವಾಗಿ ಊರ ಮಹನೀಯರು, ಮಂದಿರದ ಸದಸ್ಯರು ಭಾಗವಹಿಸಿದ ಈ ಕಾರ್ಯಕ್ರಮವನ್ನು ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು.
