ಉಡುಪಿ: ದಿನಾಂಕ 25/07/2022 ಸೋಮವಾರ ದಂದು ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರ ನೇತ್ರತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಪುಷ್ಪ ಬೇಕರಿ ಮುಂಭಾಗದಲ್ಲಿರುವ ವೃತ್ತಕ್ಕೆ “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ” ರ ಹೆಸರು ನಾಮಕರಣ ಮಾಡುವ ಬಗ್ಗೆ ವಿರೋದಿಸಿ ತುಳುನಾಡಿನ ಗಣ್ಯರಿಗೆ ಗೌರವ ನೀಡಿ ತುಳುನಾಡಿನ ಹಿರಿಯರ ಹೆಸರನ್ನು ನಾಮಕರಣ ಮಾಡಬೇಕಾಗಿ ನಗರಸಭೆಯ ಪೌರಾಯುಕ್ತರಿಗೆ ಮನವಿ ನೀಡಿದ ಶುಭ ಸಂದರ್ಭ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಜರುದ್ಧೀನ್ ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜಿಲ್ಲಾ ಕಾರ್ಯದರ್ಶಿ ಸುಭಾಶ್ ಸುಧಾನ್, ಗಣೇಶ್ ರಾವ್, ಸದಾನಂದ ಜಿ. ಪುತ್ರನ್ ಹಾಗೂ ಇನ್ನಿತರರು ಉಪಸ್ತಿತರಿದ್ದರು.
