ಕೋವಿಡ್, ಓಮಿಕ್ರಾನ್ (Covid-19) ಹೆಚ್ಚಾಗ್ತಿದ್ದಂತೆ ಜನ ತಮ್ಮ ಆರೋಗ್ಯದ ಕಾಳಜಿ ವಹಿಸುವುದು ಕೂಡ ಹೆಚ್ಚಾಗಿದೆ. ರೋಗ ನಿರೋಧಕ ಹೆಚ್ಚಿಸುವ ಆಹಾರಗಳು, ಗಿಡ ಮೂಲಿಕೆಗಳು, ಸ್ಪೈಸಸ್ ಸೇವನೆ ಹೀಗೆ ನಾನಾ ರೀತಿಯಾಗಿ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.
ಇವೆಲ್ಲ ಹೊರತು ಪಡಿಸಿ ನಮ್ಮ ದೇಹದ ಆಮ್ಲಜನಕ ಪ್ರಮಾಣ ಚೆಕ್ ಮಾಡುವ ಉಪಕರಣ ಕೂಡ ಈಗಾಗ್ಲೇ ಮಾರುಕಟ್ಟೆಗೆ ಬಂದಿದೆ. ಅದರ ಜೊತೆ ಕೋವಿಡ್-19 ಪರೀಕ್ಷಾ ಕಿಟ್ಗಳು (Covid 19 Test Kit) ಕೂಡ ಮಾರುಕಟ್ಟೆ, ಆನ್ಲೈನ್ನಲ್ಲಿ ಲಭ್ಯವಿದೆ. ಆದ್ರೆ ಈ ಕೋವಿಡ್-19 ಪರೀಕ್ಷಾ ಕಿಟ್ಗಳು ಆನ್ಲೈನ್ನಲ್ಲಿ ಕೆಲವೊಮ್ಮೆ ನಕಲಿ ಕಿಟ್ಗಳು (Duplicate Kit) ಸಿಗುತ್ತಿವೆ. ಇದನ್ನು ಕೊಳ್ಳುವ ಮುನ್ನ ಕೆಲವು ಮಾಹಿತಿಗಳ ಬಗ್ಗೆ ಎಚ್ಚರವಿರಬೇಕು. ನಕಲಿ ಕಿಟ್ಗಳನ್ನು ಖರೀದಿಸುವುದನ್ನು ತಪ್ಪಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.
ಮನೆಯಲ್ಲಿಯೇ ಕೋವಿಡ್-19 ಪರೀಕ್ಷೆ ಮಾಡಬಹುದಾದ ಕಿಟ್ ಸದ್ಯ ಆನ್ಲೈನ್ನಲ್ಲಿ ಲಭಿಸುತ್ತಿದೆ. ಹಲವು ಕಂಪನಿಗಳು ಈ ಕಿಟ್ಗಳನ್ನು ಮಾರಾಟ ಮಾಡುತ್ತಿವೆ. ಉತ್ಪನ್ನಗಳ ಸಂಖ್ಯೆ ಹೆಚ್ಚಿದ್ದಂತೆ ಯಾವುದನ್ನು ಕೊಳ್ಳುವುದು ಎಂಬ ಸಂಶಯ ಹೆಚ್ಚುತ್ತದೆ. ಹಾಗಾಗಿ ಖರೀದಿಗೂ ಮುನ್ನ ಯಾವುದು ಉತ್ತಮವೋ ಅದನ್ನ ಆಯ್ಕೆ ಮಾಡಿಕೊಳ್ಳಬೇಕು. ಹಾಗಾದ್ರೆ ಆನ್ಲೈನ್ನಲ್ಲಿ ಕೊಳ್ಳುವಾಗ ಯಾವೆಲ್ಲ ಅಂಶಗಳನ್ನು ತಿಳಿಕೊಳ್ಳಬೇಕು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ
1) ಐಸಿಎಂಆರ್ ಅಧಿಕೃತ ಅನುಮೋದನೆ
ಕೋವಿಡ್ ಕಿಟ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR) ಅನುಮೋದಿಸಿದೆಯೇ ಇಲ್ಲವೇ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕು. ಐಎಂಸಿಆರ್ ಅನುಮೋದನೆ ನೀಡಿದ ಕಿಟ್ ಮಾತ್ರ ತೆಗೆದುಕೊಳ್ಳುವುದು ಉತ್ತಮ.
2 ) ವಿಶ್ವಾಸಾರ್ಹ ಕಂಪನಿಗಳು
ಕೋವಿಡ್ ಭಯ ಹೆಚ್ಚುತ್ತಿದಂತೆ ಹಲವು ಕಂಪನಿಯ ಕಿಟ್ ಲಗ್ಗೆ ಇಟ್ಟಿದ್ದಾವೆ. ಹೀಗಾಗಿ ನಾವು ಉತ್ತಮ ಕಂಪನಿಯ ಕಿಟ್ ಯಾವುದೆಂದು ಪರೀಕ್ಷಿಸಕೊಳಬೇಕು. ಪ್ರಸ್ತುತ ಜನಪ್ರಿಯ ಮತ್ತು ಯೋಗ್ಯ ಬ್ರ್ಯಾಂಡ್ಗಳೆಂದರೆ ಮೈಲ್ಯಾಬ್ ಕೋವಿಸೆಲ್ಫ್, ಪ್ಯಾನ್ಬಿಯೋ ಕೋವಿಡ್-19, ಆಯಂಟಿಜೆನ್ ಟೆಸ್ಟ್ ಕಿಟ್, ಕೋವಿಫೈಂಡ್ ರಾಪಿಡ್ ಕಿಟ್, ಅಲ್ಟ್ರಾ ಕೋವಿ-ಕ್ಯಾಚ್ ರ್ಯಾಪಿಡ್ ಆಯಂಟಿಜೆನ್ ಕಿಟ್, ಮತ್ತು ಆಂಗ್ಕಾರ್ಡ್ ಕೋವಿಡ್-19 ಆಯಂಟಿಜೆನ್ ಕಿಟ್ ಮುಖ್ಯವಾಗಿದ್ದು ಇವುಗಳನ್ನು ಕೊಳ್ಳುವುದು ಉತ್ತಮ.
3) ಕಾಮೆಂಟ್ಗಳನ್ನು ಓದಿ
ನೀವೆಲ್ಲಾ ಆನ್ಲೈನ್ನಲ್ಲಿ ಉತ್ಪನ್ನ ಖರೀದಿಸುವಾಗ, ಕಾಮೆಂಟ್ಗಳನ್ನು ಓದುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಕಾಮೆಂಟ್ವಿಭಾಗದಲ್ಲಿ ಉತ್ಪನ್ನ ಕೊಂಡವರು ಅದರ ಬಗ್ಗೆ ಬರೆದುಕೊಂಡಿರುತ್ತಾರೆ. ಟೀಕೆ ಟಿಪ್ಪಣಿಗಳು, ಸಲಹೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ವಸ್ತು ಎಷ್ಟು ಪ್ರಯೋಜನಕಾರಿಯಾಗಿದೆ, ಇದನ್ನು ಕೊಳ್ಳಬಹುದೇ ?, ಇದರಲ್ಲಿರುವ ಲೋಪ ಏನು ? ಎಲ್ಲವುದರಗಳ ಬಗ್ಗೆ ಕಾಮೆಂಟ್ ಉತ್ತರ ನೀಡುತ್ತವೆ. ಹಾಗಾಗಿ ಕಿಟ್ ಖರೀದಿ ಮುನ್ನ ಕಾಮೆಂಟ್ ಚೆಕ್ ಮಾಡಿಕೊಳ್ಳಬೇಕು
4 ) ವಿವಿಧ ವೆಬ್ಸೈಟ್ಗಳ ಪರಿಶೀಲನೆ
ಆನ್ಲೈನ್ ಶಾಪಿಂಗ್ ಸ್ಟೋರ್ಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಫಾರ್ಮ್ಈಸಿ ಹೀಗೆ ಬೇರೆ ಬೇರೆ ವೆಬ್ಸೈಟ್ಗಳನ್ನು ಚೆಕ್ ಮಾಡಿಕೊಳ್ಳಬೇಕು. ನಿಮಗೆ ಬೇಕಾದ ಕಿಟ್ ಅನ್ನು ಬೇರೆ ಬೇರೆ ಆನ್ಲೈನ್ ಸ್ಟೋರ್ಗಳಲ್ಲಿ ಹೋಲಿಸಿ ನಂತರ ಖರೀದಿ ಮಾಡಬೇಕು.
5) ಹಗರಣ, ದೂರು, ವಿಮರ್ಶೆ ಪರಿಶೀಲನೆ
ವೆಬ್ಸೈಟ್, ಕಂಪನಿ ಅಥವಾ ಮಾರಾಟಗಾರರ ಹೆಸರನ್ನು ಆನ್ಲೈನ್ನಲ್ಲಿ ಹುಡುಕಿ. ಅವುಗಳ ಬಗ್ಗೆ ಇರುವ ಲೋಪ-ದೋಷಗಳ ಬಗ್ಗೆ ತಿಳಿಯಿರಿ. ಬೇಕಾದಲ್ಲಿ ‘ಹಗರಣ’, ‘ದೂರು’ ಅಥವಾ ‘ವಿಮರ್ಶೆ’ ಯಂತಹ ಪದಗಳನ್ನು ಬರೆದು ಹುಡುಕಿ ಆವಾಗ ನಿಮಗೆ ಅನುಮಾನಗಳಿದ್ದರೆ ಅಲ್ಲಿ ನಿಮಗೆ ಸಲಹೆ ಸಿಗುತ್ತದೆ.
ಈ ಎಲ್ಲಾ ವಿಚಾರಗಳನ್ನು ಪರೀಕ್ಷಿಸಿಕೊಂಡಲ್ಲಿ ನಕಲಿ ಕಿಟ್ಗಳ ಹಾವಳಿಯನ್ನು ತಪ್ಪಿಸಬಹುದು. ಇದು ಕೇವಲ ಕೋವಿಡ್ ಕಿಟ್ ಕೊಳ್ಳುವಾಗ ಮಾತ್ರವಲ್ಲದೆ ಆನ್ಲೈನ್ನಲ್ಲಿ ಯಾವುದೇ ವಸ್ತು ಕೊಳ್ಳಬೇಕಾದರು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.