ಸುಬ್ರಹ್ಮಣ್ಯ: ಇಲ್ಲಿನ ದೇವರಗದ್ದೆ ಶ್ರೀ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೇವಸ್ಥಾನಕ್ಕೆ ಶುಕ್ರವಾರ ಖ್ಯಾತ ರಾಪರ್ ಚಂದನ್ ಶೆಟ್ಟಿ ಮತ್ತು ಗಿಚ್ಚಿ ಗಿಲಿ ಗಿಲಿ ನಿರೂಪಕ ನಿರಂಜನ್ ದೇಶಪಾಂಡೆ , ಅವರ ಪತ್ನಿ ಶಸ್ವಿನಿ ದೇಶಪಾಂಡೆ ಭೇಟಿ ನೀಡಿ ಅಜ್ಜನ ದರ್ಶನ ಪಡೆದರು.
ಸನ್ನಿಧಾನಕ್ಕೆ ಭೇಟಿ ವೇಳೆ ಚಂದನ್ ತಾನು ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಲ್ಬಂ ಸಾಂಗ್ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಮೂಡಿ ಬರಬೇಕು ಎಂದು ಕೊರಗಜ್ಜನಲ್ಲಿ ಮದ್ಯಸ್ಥ ಬಾಬು ಎಂ ಮೊಗ್ರರ ಮೂಲಕ ಪ್ರಾರ್ಥಿಸಿದರು. ಅಲ್ಲದೆ ಪ್ರಪ್ರಥಮವಾಗಿ ತಾನು ನಾಯಕ ನಟನಾಗಿ ಅಭಿನಯಿಸಿದ ಚಲನಚಿತ್ರವು ಇನ್ನೇನು ಬಿಡುಗಡೆಯಾಗಲಿದ್ದು ಯಶಸ್ವಿ ಯಾಗಬೇಕು ಎಂದು ಪ್ರಾರ್ಥನೆ ಮಾಡಿದರು.