Friday, June 9, 2023

ಉಳ್ಳಾಲದಲ್ಲಿ ಉಸಿರುಗಟ್ಟಿಸಿ ಜಾನುವಾರುಗಳ ಸಾಗಾಟ.! ಹಸುಗಳ ರಕ್ಷಣೆ

ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಸಾಗಿಸುತ್ತಿದ್ದ ವೇಳೆ ರಸ್ತೆ ಏರಲಾರದೆ ವಾಹನ‌ ನಿಂತಿದ್ದು ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಕುತ್ತಾರು...
More

    Latest Posts

    ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

    ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

    500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

    ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

    ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

    ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

    ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

    ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

    ಉಳ್ಳಾಲ : ತುಳುನಾಡಿನಲ್ಲಿ ಮತ್ತೊಮ್ಮೆ ಕಾರಣೀಕ ಮೆರೆದ ಕೊರಗಜ್ಜ ದೈವ- ಕೊರಗಜ್ಜ ದೈವದ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕ್ ಕದ್ದ ಕಳ್ಳನ ಬಂಧನ

    ಉಳ್ಳಾಲ: ತೊಕ್ಕೊಟ್ಟು,ಕೋಟೆಕಾರಿನ‌ ಕೊರಗಜ್ಜನ‌ ಕಟ್ಟೆ ಮತ್ತು ಮಂಗಳೂರಿನಲ್ಲಿ ಸರಣಿ ಬೈಕ್ ಕಳ್ಳತನ ನಡೆಸಿ ಕರಾಮತ್ತು ತೋರಿದ ಮೂವರು ಕಳ್ಳರನ್ನ ವ್ಯಕ್ತಿಯೋರ್ವರು ನೀಡಿದ ಸುಳಿವಿನ‌ ಆಧಾರದಲ್ಲಿ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

    ಕಳೆದ ಮಂಗಳವಾರ ಮುಂಜಾನೆ ನಸುಕಿನ ವೇಳೆ ಕೋಟೆಕಾರಿನ ಸಾರ್ವಜನಿಕ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಸ್ಥಳೀಯ ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜ್ ಯಾನೆ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಇಬ್ಬರು ಕಳವುಗೈದಿದ್ದು ,ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿತ್ತು.ಅದೇ ದಿನ ನಸುಕಿನ ವೇಳೆ ತೊಕ್ಕೊಟ್ಟಿನ ಕಾಂಗ್ರೆಸ್ ಕಛೇರಿ ಮುಂಭಾಗದ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನೂ ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿತ್ತು.ಇಷ್ಟಲ್ಲದೆ ಮಂಗಳೂರಿನ‌‌ ಕೆಲವೆಡೆ ಕಳ್ಳರು ಬೈಕ್ ಗಳನ್ನ ಕದ್ದಿದ್ದರು.

    ರಫೀಕನಿಗೆ ಬೈಕಿನ ಸುಳಿವು ಕೊಟ್ಟ ಸೋನು
    ಕೋಟೆಕಾರಲ್ಲಿ ಕಳವಾದ ಬೈಕ್ ಮಾಲಕ ರಾಜೇಶ್ ಅವರ ಮಿತ್ರ ರಫೀಕ್ ಅವರಿಗೆ ಗುರುವಾರ ಬೆಳಗ್ಗೆ ಮಂಗಳೂರಿನ ಮಿನಿ ವಿದಾನಸೌಧದ ಬಳಿ ಕಳವಾದ ಬೈಕ್ ಕಾಣ ಸಿಕ್ಕಿದೆ.ರೈಲ್ವೆ ಸ್ಟೇಷನ್ ದಾರಿಯ ಅಂಗಡಿ ಎದುರು ನಿಲ್ಲಿಸಿದ್ದ ಬೈಕ್ನ ನಂಬರ್ ಪ್ಲೇಟನ್ನ ಕಿತ್ತೆಸೆಯಲಾಗಿದ್ದು ಬೈಕ್ ನಲ್ಲಿ ಅಂಟಿಸಿದ್ದ ಸೋನು ಸ್ಟಿಕ್ಕರನ್ನ ಹಾಗೇ ಬಿಟ್ಟಿದ್ದರು.ಇದು ರಾಜೇಶ್ ಅವರ ಬೈಕ್ ಎಂದು ಖಾತರಿ ಪಡಿಸಿದ ರಫೀಕ್ ಅಂಗಡಿ ಎದುರಲ್ಲಿದ್ದ ಹುಡುಗರಲ್ಲಿ ಬೈಕ್ ಎಲ್ಲಿಂದ ಸಿಕ್ತು ಎಂದಾಗ ಗಲಿಬಿಲಿಗೊಂಡ ಹುಡುಗರು ಪಲಾಯನಗೈದಿದ್ದಾರೆ.ತಕ್ಷಣ ರಫೀಕ್ ಅವರು ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲಿ ವಿಚಾರ ತಿಳಿಸಿದ್ದಾರೆ.ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಸಬ ಬೆಂಗ್ರೆ ಮತ್ತು ಪಡುಬಿದ್ರೆ ಮೂಲದ ಮೂವರು ಕದೀಮರನ್ನ ಬಂಧಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.ಸರಣಿ ಬೈಕ್ ಕಳ್ಳತನದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿರುವ ಸಾಧ್ಯತೆಗಳಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಕಾರಣೀಕ ಮೆರೆದ ಕೊರಗಜ್ಜ
    ಕೋಟೆಕಾರು ಮತ್ತು ತೊಕ್ಕೊಟ್ಟಲ್ಲಿ ಕರಾವಳಿಯ ಆರಾಧ್ಯ ಕೊರಗಜ್ಜ ದೈವದ ಕಟ್ಟೆಯ ಬಳಿಯೇ ನಿಲ್ಲಿಸಲಾಗಿದ್ದ ಬೈಕ್ ಗಳನ್ನ ಕದೀಮರು ರಾಜಾರೋಷವಾಗಿ ಕದ್ದೊಯ್ದಿದ್ದರು.ಇದರಿಂದ ಬೈಕ್ ಮಾಲೀಕರಲ್ಲದೆ ಸ್ಥಳಿಯರು ಬೇಸರಗೊಂಡಿದ್ದು ನಿನ್ನೆ ಕೋಟೆಕಾರಿನ ಕೊರಗಜ್ಜನ ಕಟ್ಟೆಯಲ್ಲಿ ಶೀಘ್ರನೆ ಕಳ್ಳರ ಬಂಧನವಾಗುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.ಸ್ವಾಮಿ ಕೊರಗಜ್ಜನ ಕಾರಣೀಕದಿಂದಲೇ ಕಳ್ಳರ ಬಂಧನ ಸಾಧ್ಯವಾಗಿದೆ ಎಂದು ವಿನಾಯಕ ಇಲೆಕ್ಟ್ರಿಕಲ್ಸ್ನ ಮಾಲಕರಾದ ರಾಜೇಶ್ ಪೂಜಾರಿ ಹೇಳಿದ್ದಾರೆ.

    Latest Posts

    ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

    ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

    500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

    ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

    ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

    ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

    ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

    ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

    Don't Miss

    ಮಂಗಳೂರು : ದಡಾರ – ರುಬೆಲ್ಲಾ ನಿರ್ಮೂಲನೆಗೆ ಎಲ್ಲಾ ಇಲಾಖೆಗಳ ಪರಿಣಾಮಕಾರಿ ಸಹಕಾರ ಅಗತ್ಯ

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪರಿಣಾಮಕಾರಿ ಸಹಕಾರ ಅತ್ಯಗತ್ಯ....

    ಕಂಬಳ‌ ಇತಿಹಾಸಲ್ಲಿ ನೂತನ ಅಧ್ಯಾಯ: ಯುವತಿಯರಿಗೆ ತರಬೇತಿ‌ ನೀಡಲು ಅಕಾಡೆಮಿ ಸಿದ್ಧ

    ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ ದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಕಂಬಳ ಗೆದ್ದಿದೆ. ಇದರಿಂದಾಗಿ ಕಂಬಳ ಆಯೋಜಕರು ಮತ್ತಷ್ಟು ಪುಳಕಿತರಾಗಿದ್ದಾರೆ. ಪ್ರಸಕ್ತ ವರ್ಷದ ಕಂಬಳ...

    ಒಡಿಶಾ ಭೀಕರ ರೈಲು ದುರಂತ ಸ್ಥಳಕ್ಕೆ ‘ಪ್ರಧಾನಿ ಮೋದಿ’ ಭೇಟಿ

    ನವದೆಹಲಿ : ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಂತ್ರ ಕಟಕ್ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ.

    ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ

    ಕಾರ್ಕಳ : ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

    ಮುಂಬೈ-ಗೋವಾ ವಂದೇ ಭಾರತ್‌ ಎಕ್ಸ್‌ಪ್ರೆಸ್ ಉದ್ಘಾಟನೆ ರದ್ದು

    ಮುಂಬಯಿ: ಇಂದು ಉದ್ಘಾಟನೆಯಾಗಬೇಕಿದ್ದ ಮುಂಬೈ-ಗೋವಾ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮಾದರಿಯಲ್ಲಿ ಉದ್ಘಾಟಿಸಬೇಕಿತ್ತು.ಆದರೆ...