ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎಡ್ವಿನ್ ಜೆ ಎಫ್ ಡಿ ಸೋಜಾ(75) ವಿಧಿವಶರಾಗಿದ್ದಾರೆ. ಕೊಂಕಣಿ ಭಾಷೆಯಲ್ಲಿ ಕಥೆ ಹಾಗೂ ಕಾದಂಬರಿಗಳಿಗೆ ತಮ್ಮದೇ ಹೊಸ ಶೈಲಿಯೊಂದನ್ನು ಪರಿಚರಿಸಿದ ಎಡ್ವಿನ್ ಅವರ 33 ಕಾದಂಬರಿಗಳು ಹಾಗೂ ನೂರಕ್ಕಿಂತಲೂ ಹೆಚ್ಚಿನ ಸಣ್ಣಕಥೆಗಳು ಪ್ರಕಟವಾಗಿವೆ.
ಇನ್ನು ಇಂಗ್ಲಿಷ್, ಹಿಂದಿ ಸೇರಿದಂತೆ ಆರು ಭಾಷೆಗಳಿಗೆ ಎಡ್ವಿನ್ ಅವರ ಕೃತಿಗಳು ಭಾಷಾಂತರಗೊಂಡಿವೆ. ಎಡ್ವಿನ್ ಅವರ ’ಕಾಳೆಂ ಭಾಂಗಾರ್’ ಕಾದಂಬರಿಗೆ 2013ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಾಗೂ ಅದೇ ವರ್ಷದ ವಿಮಲಾ ವಿ ಪೈ ಪುರಸ್ಕಾರ ದೊರಕಿತ್ತು. ಇದೇ ಕಾದಂಬರಿಯ ಇಂಗ್ಲಿಷ್ ಭಾಶಾಂತರಕ್ಕೆ ಎಡ್ವಿನ್ ಅವರು 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಎಡ್ವಿನ್ ಜೆ ಎಫ್ ಡಿ’ಸೋಜಾ ನಿಧನಕ್ಕೆ ಕೊಂಕಣಿ ಸಾಹಿತ್ಯ ವಲಯ ಕಂಬನಿ ಮಿಡಿದಿದೆ.