ಉಡುಪಿ: ಕೊಂಕಣ ರೈಲ್ವೇಯಲ್ಲಿ ಅಳವಡಿಸಲಾದ ವಿದ್ಯುದ್ದೀಕರಣ ಯೋಜನೆಯು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸುವರು. ಉದ್ಘಾಟನೆಯನ್ನು ಜೂ. 20 ಅಥವಾ 21ರಂದು ಮಧ್ಯಾಹ್ನ 12ಕ್ಕೆ ನೆರವೇರಿಸುವ ಸಾಧ್ಯತೆ ಇದ್ದು ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಾಗಿದೆ. ಜೂ. 20ರಂದು ಉದ್ಘಾಟನೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀ ಪದ ತೋಕೂರುವರೆಗೆ 760 ಕಿ.ಮೀ. ದೂರದ ಕೊಂಕಣ ರೈಲ್ವೇ ಹಳಿಯಲ್ಲಿ ಸುಮಾರು 1,287 ಕೋ.ರೂ. ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗಿದೆ. 2017ರಲ್ಲಿ ಕಾಮಗಾ ರಿಯನ್ನು ಆರಂಭಿಸಲಾಗಿತ್ತು. ಕೊರೊನಾ ಕಾರಣದಿಂದ ಕಾಮಗಾರಿ ವೇಗಕ್ಕೆ ಹಿನ್ನಡೆಯಾಗಿತ್ತು. ಈಗ ಎಲ್ಲ ಬಗೆಯ ಪರೀಕ್ಷೆ ಪರಿಶೀಲನೆ ನಡೆದು ಉದ್ಘಾಟನೆಯಾಗಲಿದೆ. ಉದ್ಘಾಟನೆಯ ನೇರ ಪ್ರಸಾರವನ್ನು ಉಡುಪಿ, ಮಡ ಗಾಂವ್ ಮತ್ತು ರತ್ನಾಗಿರಿ ರೈಲು ನಿಲ್ದಾಣಗಳಲ್ಲಿ ಬಿತ್ತರಿಸ ಲಾಗುವುದು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.ವಿದ್ಯುದೀಕರಣದಿಂದ ಇಂಧನ ವೆಚ್ಚದಲ್ಲಿ ಭಾರೀ ಪ್ರಮಾಣದ ಉಳಿತಾಯ ಆಗಲಿದೆ.
