Friday, March 29, 2024
spot_img
More

    Latest Posts

    ಅರವಿಂದ್‌ ಕೇಜ್ರಿವಾಲ್ ಸಮ್ಮುಖದಲ್ಲಿ AAP ಸೇರಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌

    ಬೆಂಗಳೂರು:ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಎಪಿ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಸಮ್ಮುಖದಲ್ಲಿ ಎಎಪಿ (AAP) ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್​ ಸಮಾವೇಶದಲ್ಲಿ ಆಪ್ ಶಾಲು ಹಾಕಿ, ಪಕ್ಷದ ಟೋಪಿ ಹಾಕಿ ಅವರನ್ನು ಅರವಿಂದ ಕೇಜ್ರಿವಾಲ್ ಪಕ್ಷಕ್ಕೆ ಸ್ವಾಗತ ಮಾಡಿದರು. ಎಎಪಿ ಸೇರಿದ ಬಳಿಕ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್​, 2023 ಕ್ಕೆ ಸರ್ಕಾರ ಬದಲಾಗಬೇಕು, ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕು. 2024 ಕ್ಕೆ ಅರವಿಂದ ಕೇಜ್ರಿವಾಲ್ ಅವರು ಈ ದೇಶದ ಪ್ರಧಾನಿ ಆಗಬೇಕು ಎಂದರು. ಇನ್ನು ಇದೇ ವೇಳೆ ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೆ.ಮಥಾಯಿ, ಗುಲ್ಬರ್ಗದ ಬಿಜೆಪಿ ಮುಖಂಡರಾಗಿದ್ದ ಸಿದ್ದು ಪಟೇಲ್ , ಕಾಂಗ್ರೆಸ್ ನ ಕಾಳಿದಾಸ್, ಅಕ್ರಂ ಶರೀಫ್ ಕೂಡ ಎಎಪಿ ಸೇರಿದ್ದರು.

    ಕರ್ನಾಟಕದಲ್ಲೂ ಸರ್ಕಾರ ರಚನೆ ವಿಶ್ವಾಸ
    ರೈತನ ಮಗ ರೈತನಾಗಬೇಕಿಲ್ಲ. ದೇಶದ ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ನಾನು ಅಣ್ಣಾ ಹಜಾರೆ ಜೊತೆ ಸತ್ಯಾಗ್ರಹ ನಡೆಸಿದ್ದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದೆವು. ಆ ಹೋರಾಟದ ಮೂಲಕ ಚುನಾವಣೆಗೆ ಬಂದೆವು. ದೆಹಲಿಯಂತ ಸಣ್ಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೆವು. ಈಗ ಬಹುದೊಡ್ಡ ಪಂಜಾಬ್ ನಲ್ಲೂ ಸರ್ಕಾರ ಮಾಡಿದ್ದೇವೆ. ಈಗ ಕರ್ನಾಟಕದಲ್ಲೂ ಸರ್ಕಾರ ರಚನೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss