ಸುಳ್ಯ: ದ.ಕ-ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಲಘು ಕಂಪನ ಉಂಟಾಗಿದೆ. ಇಂದು ಮುಂಜಾನೆ ಸುಮಾರು ಮೂರು ಗಂಟೆ ವೇಳೆಗೆ ಭೂಮಿ ಆರನೇ ಬಾರಿಗೆ ಕಂಪಿಸಿದೆ.
ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ, ಸಂಪಾಜೆ ಭಾಗಗಳಲ್ಲಿ ಭೂಮಿ ನಡುಗಿದೆ. ಇದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.