Friday, April 26, 2024
spot_img
More

    Latest Posts

    ಪುತ್ತೂರಿನ ಜಾತ್ರಾ ಗದ್ದೆಯಲ್ಲಿ ಅಪ್ರಾಪ್ತರ ಭಿಕ್ಷಾಟನೆಗೆ ಬ್ರೇಕ್:ಪೋಷಕರಿಗೆ ಖಡಕ್ ವಾರ್ನಿಂಗ್

    ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ
    ಬಾಲಕಿಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಇತರ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿ
    ಅವರ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಪುನರ್ವಸತಿ ಕಲ್ಪಿಸಿದ್ದಾರೆ.

    ಈ ಮಕ್ಕಳು ಜಾತ್ರೆಯ ಗದ್ದೆಯಲ್ಲಿ ಭಿಕ್ಷಾಟನೆ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಘಟಕಕ್ಕೆ ದೂರು
    ಬಂದಿತ್ತು.
    ಈ ಹಿನ್ನೆಲೆಯಲ್ಲಿ ಘಟಕದ ಸಿಬ್ಬಂದಿಗಳು, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು
    ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳ ನೆರವಿನಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಅಪ್ರಾಪ್ತ ವಯಸ್ಸಿನ ಮಕ್ಕಳು ಭಿಕ್ಷೆ ಬೇಡುವುದನ್ನು ನಿಲ್ಲಿಸಲು ಅವರ ಪೋಷಕರಿಗೂ ಕೂಡ
    ಎಚ್ಚರಿಕೆಯನ್ನು ನೀಡಲಾಯಿತು. ಕಾರ್ಯಾಚರಣೆಯಲ್ಲಿ ಚೈಲ್‌ಲೈನ್ ಕೇಂದ್ರದ ಸಂಯೋಜಕ ದೀಕ್ಷಿತ
    ಅಡ್ರಪ್ಪಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕುಮಾರ್ ಶೆಟ್ಟಿಗಾರ್, ಮಹಿಳಾ ಠಾಣೆ ಸಿಬ್ಬಂ
    ದಿನೇಶ್ ಪಾಲ್ಗೊಂಡಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss