Monday, November 29, 2021

ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ವ್ಯಕ್ತಿ ಸಾವು!

ಕಾಪು:ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ನಡೆದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ...
More

  Latest Posts

  ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

  ದಾವಣಗೆರೆ: ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವನೆ ಇಲ್ಲ. ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದು, ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

  ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

  ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

  ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

  ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

  ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

  ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

  ಕೇರಳಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್‌ ಅಗ್ಗ: ಕೇರಳ ಬಂಕ್‌ಗಳಲ್ಲಿ ವ್ಯವಹಾರ ಕುಸಿತ

  ಮಂಗಳೂರು:  ಕೇಂದ್ರ ಹಾಗೂ ಕರ್ನಾಟಕ ಸರ್ಕಾರ ಇಂಧನ ಸುಂಕ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಕೇರಳ ಗಡಿಯಲ್ಲಿರುವ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳು ಕೇರಳದ ಗ್ರಾಹಕರನ್ನು ಸೆಳೆಯಲು ದರ ಇಳಿಕೆಯ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆದಿದೆ.

  ಕೇಂದ್ರ ಸರ್ಕಾರ ಇಂಧನ ಸುಂಕ ಇಳಿಕೆ ಮಾಡಿದಂದೇ ಕರ್ನಾಟಕ ಸರ್ಕಾರವೂ ಪೆಟ್ರೋಲ್‌, ಡೀಸೆಲ್‌ಗೆ ತಲಾ 7 ರು.ನಷ್ಟು ಸುಂಕ ಕಡಿತ ಮಾಡಿತ್ತು. ಆದರೆ ಕೇರಳ ಸರ್ಕಾರ ಸುಂಕ ಕಡಿತ ಮಾಡದೆ ಇರುವುದರಿಂದ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳಿಗಿಂತ ಕೇರಳದಲ್ಲಿ ಡೀಸೆಲ್‌ ಲೀ.ಗೆ 8 ರು., ಪೆಟ್ರೋಲ್‌ಗೆ 5 ರು.ನಷ್ಟುದರ ಹೆಚ್ಚಿದೆ. ಇದರ ಲಾಭ ಪಡೆಯಲು ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳು ದರ ಇಳಿಕೆಯ ಬ್ಯಾನರ್‌ಗಳನ್ನು ಅಳವಡಿಸುತ್ತಿವೆ.

  ಫುಲ್‌ ಟ್ಯಾಂಕ್‌ ಹಾಕಿ ಹೋಗ್ತಾರೆ: 

  ಈಶ್ವರಮಂಗಲ ಸಮೀಪದ ಗಾಳಿಮುಖ ಪೆಟ್ರೋಲ್‌ ಬಂಕ್‌ನಲ್ಲಿ ಈ ರೀತಿಯ ಬ್ಯಾನರ್‌ ಅಳವಡಿಸಿದ್ದು, ಇದರ ಫೋಟೊ ಕೇರಳದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಕರ್ನಾಟಕದಲ್ಲಿ ಇಂಧನ ದರ ಇಳಿಕೆಯ ಬಳಿಕ ಕೇರಳದಿಂದ ಬರುವ ಗ್ರಾಹಕರ ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆಯಾಗಿದೆ. ಅನೇಕರು ದೂರದೂರುಗಳಿಂದ ಬಂದು ಫುಲ್‌ ಟ್ಯಾಂಕ್‌ ಇಂಧನ ತುಂಬಿಸಿ ಹೋಗುತ್ತಿದ್ದಾರೆ ಎಂದು ಬಂಕ್‌ನ ಮ್ಯಾನೇಜರ್‌ ಮನ್ಸೂಕ್‌ ತಿಳಿಸಿದರು.

  ರಸ್ತೆಯಲ್ಲಿ ಹೋಗುವವರಿಗೆ ನಮ್ಮ ಪೆಟ್ರೋಲ್‌ ಬಂಕ್‌ ಕೇರಳದಲ್ಲಿದೆಯಾ, ಕರ್ನಾಟಕದಲ್ಲಿದೆಯಾ ಎನ್ನುವ ಸಂಶಯ ಬರುವುದು ಸಹಜ. ಹಾಗಾಗಿ ಬ್ಯಾನರ್‌ನಲ್ಲಿ ಕರ್ನಾಟಕವನ್ನು ಮುಖ್ಯವಾಗಿ ನಮೂದಿಸಲಾಗಿದೆ. ಈ ಬ್ಯಾನರ್‌ ಕೇರಳದಲ್ಲಿ ವೈರಲ್‌ ಆಗಿರುವುದರಿಂದ ಬಹಳಷ್ಟು ಮಂದಿ ಕರೆ ಮಾಡಿ ದರ ಇಳಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ ಎಂದು ಮನ್ಸೂಕ್‌ ಹೇಳಿದ್ದಾರೆ.

  ಕೇಂದ್ರ ಸರ್ಕಾರ ಇಂಧನ ಸುಂಕ ಇಳಿಸುವ ಮೊದಲು ಕೇರಳದಲ್ಲಿ ಪೆಟ್ರೋಲ್‌ಗೆ ಕರ್ನಾಟಕಕ್ಕಿಂತ 2 ರು. ಕಡಿಮೆ ಬೆಲೆ ಇತ್ತು. ಆಗ ಗಡಿಭಾಗದ ಕರ್ನಾಟಕದ ಜನರು ಕೇರಳಕ್ಕೆ ಹೋಗಿ ಪೆಟ್ರೋಲ್‌ ತುಂಬಿಸಿ ಬರುತ್ತಿದ್ದರು. ಈಗ ಈ ಪ್ರಕ್ರಿಯೆ ಉಲ್ಟಾಆಗಿದೆ. ಪ್ರಸ್ತುತ ಗಾಳಿಮುಖ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ಗೆ 100.46 ರು. ಇದ್ದರೆ, ಡೀಸೆಲ್‌ಗೆ 84.87 ರು. ಬೆಲೆ ಇದೆ. ಆದರೆ ಕೇರಳದ ಮಂಜೇಶ್ವರದಲ್ಲಿ ಪೆಟ್ರೋಲ್‌ಗೆ 105.38 ರು., ಡೀಸೆಲ್‌ಗೆ 92.58 ರು. ದರ ಇದೆ.

  ಪೆಟ್ರೋಲ್, ಡಿಸೇಲ್ ದರ ತಲಾ 7 ರೂ ಇಳಿಕೆ

  ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್  ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 5 ರೂ ಹಾಗೂ ಡಿಸೇಲ್ ಮೇಲಿನ ಸುಂಕವನ್ನು 10 ರೂ ಇಳಿಕೆ ಮಾಡಿತ್ತು..

  ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅಬಕಾರಿ ಸುಂಕ(VAT) ಕಡಿತದ ಬಳಿಕ ತಟಸ್ಥಗೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸುಂಕ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಬಿಜೆಪಿ ಆಡಳಿತ ರಾಜ್ಯಗಳು ರಾಜ್ಯ ಸರ್ಕಾರ ಹಾಕಿದ್ದ ಸುಂಕ ಕಡಿತಗೊಳಿಸಿದೆ. ಪರಿಣಾಮ ದೇಶದಲ್ಲಿ ಇದೀಗ ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಅಗ್ಗವಾಗಿದೆ.

  Latest Posts

  ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

  ದಾವಣಗೆರೆ: ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವನೆ ಇಲ್ಲ. ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದು, ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

  ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

  ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

  ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

  ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

  ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

  ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

  Don't Miss

  ಮಂಗಳೂರು: ‘ಮಾಮ್‌’ ನೂತನ ಪದಾಧಿಕಾರಿಗಳ ಆಯ್ಕೆ

  ಮಂಗಳೂರು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

  ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

  ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ...

  ಪಾಣೆಮಂಗಳೂರು ನೇತ್ರಾವತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ!

  ಬಂಟ್ವಾಳ: ಟೈಲರ್ ವೃತ್ತಿಗೆಂದು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪೊಡಿಕ್ಕಳ ಬೆಂಜನಪದವು ನಿವಾಸಿ ನಾರಾಯಣ ಮೂಲ್ಯ (62) ಮೃತಪಟ್ಟ ವ್ಯಕ್ತಿ....

  ಕಾಪು: ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು

  ಕಾಪು: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನ.26ರ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಮಲ್ಲಾರು ಪಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಬಳಿಯ ನಿವಾಸಿ ಅಬ್ದುಲ್ ರಜಾಕ್ (48)...

  ಮಂಗಳೂರು: ದೋಣಿಯಿಂದ ಬಿದ್ದು ಮೀನುಗಾರ ಸಾವು

  ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ....