Tuesday, April 23, 2024
spot_img
More

    Latest Posts

    ಕೆದ್ದಳಿಕೆ ಸ.ಹಿ.ಪ್ರಾ.ಶಾಲೆ: ರಜತ ಮಹೋತ್ಸವ, 12.5ಲಕ್ಷ ರೂ.ವೆಚ್ಚದ ಗ್ರಂಥಾಲಯಕ್ಕೆ ಶಿಲಾನ್ಯಾಸ

    ಬಂಟ್ವಾಳ :ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲು ಕಂಪ್ಯೂಟರೀಕೃತ ಗ್ರಂಥಾಲಯ ನಿರ್ಮಿಸಲು ೧೨.೫ ಲಕ್ಷ ರೂ. ವೆಚ್ಚದಲ್ಲಿ ನೂತನ ಗ್ರಂಥಾಲಯಕ್ಕೆ ಶಿಲಾನ್ಯಾಸ ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
    ಅವರು ರವಿವಾರ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸ.ಹಿ.ಪ್ರಾ.ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪದ  ಅಧ್ಯಕ್ಷತೆ ವಹಿಸಿ   ಮಾತನಾಡಿದರು.
     ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸರಕಾರದ ಜತೆ ಪೋಷಕರು, ಶಿಕ್ಷಕರು ಕೈಜೋಡಿಸಿದಾಗ ಶಾಲೆಗಳು ಅಭಿವೃದ್ಧಿ ಹೊಂದುತ್ತದೆ. ಕೆದ್ದಳಿಕೆಯ ಜನತೆಯ ವಿಶೇಷ ಕಾಳಜಿಯಿಂದ ಶಾಲೆ ಅಭಿವೃದ್ಧಿ ಹೊಂದಿದೆ. ರಾಷ್ಟ್ರ ಪ್ರಶಸ್ತಿಯ ರಮೇಶ್ ನಾಯಕ್‌ರಿಂದ ಶಾಲೆ ರಾಷ್ಟ್ರ  ಮಟ್ಟದಲ್ಲಿ  ಮೆರೆಯುವಂತಾಗಿದೆ ಎಂದರು.


    ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ ಕಾರಂತ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ, ನಿವೃತ್ತ ಪಿಡಿಒ ಗಣಪತಿ ಮುಚ್ಚಿನ್ನಾಯ, ಜಿ.ಪಂ.ಅಭಿಯಂತರ ಕೃಷ್ಣ , ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ರಮೆಶ್ ನಾಯಕ್ ರಾಯಿ, ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ ದೇವಾಡಿಗ, ಉಪಾಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ,  ಗ್ರಾ.ಪಂ.ಸದಸ್ಯರಾದ  ಶೇಷಗಿರಿ, ಪ್ರಶಾಂತ ಶೆಟ್ಟಿ, ಬಂಟ್ವಾಳ ಕ್ಷೇತ್ರ ಸಂಪನ್ಮೂಲಾಽಕಾರಿ ರಾಘವೇಂದ್ರ ಬಲ್ಲಾಳ್,   ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಸೀತಾರಾಮ ಪೆರುವಾರ್,  ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ರಜತ ಮಹೋತ್ಸವ ಸಮಿತಿ ಸದಸ್ಯರು, ಮತ್ತಿತರರು  ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸಹಸ್ರನಾಮ , ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಹಿಂದಿನ ಮುಖ್ಯ ಶಿಕ್ಷಕರು, ದಾನಿಗಳನ್ನು ಸಮ್ಮಾನಿಸಲಾಯಿತು.
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಸ್ವಾಗತಿಸಿ, ಪ್ರಸ್ತಾವಿಸಿದರು. ಮುಖ್ಯ ಶಿಕ್ಷಕ ಕುಮಾರ್ ಸಿ. ವರದಿ ವಾಚಿಸಿದರು. ಶಿಕ್ಷಕಿ ಉಮಾ ಡಿ.ಗೌಡ ವಂದಿಸಿದರು. ಉದಯ ಕುಮಾರ್ ಶೆಟ್ಟಿ ಮತ್ತು ಚಂದಪ್ಪ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು.ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.  

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss