ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯನ್ನು ನಗರದ ಬಾವುಟಗುಡ್ಡೆಯಲ್ಲಿ ಪ್ರತಿಷ್ಟಾಪಿಸಲು ಸಿದ್ಧತೆ ನಡೆದಿದ್ದು, ಕಂಚಿನ ಪ್ರತಿಮೆಯನ್ನು ಕರಾವಳಿಗೆ ತರಲಾಗಿದೆ. ನಗರದ ಬಾವುಟಗುಡ್ಡದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಗೆ ಕರಾವಳಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.


ಸೋಮವಾರ ಬೆಳಗ್ಗೆ ಸುಳ್ಯದ ಮೂಲಕ ಕರಾವಳಿ ಪ್ರವೇಶಿಸಿದ ಸಂದರ್ಭದಲ್ಲಿ ಸುಳ್ಯದಲ್ಲಿ ಪ್ರತಿಮೆಗೆ ಭವ್ಯ ಸ್ವಾಗತ ಕೋರಲಾಗಿತ್ತು. ಬಳಿಕ ಪುತ್ತೂರು, ಬಂಟ್ವಾಳಗಳಲ್ಲೂ ಅದ್ದೂರಿ ಸ್ವಾಗತ ಕೋರಿ ಅಂತಿಮವಾಗಿ ಮಂಗಳೂರು ತಲುಪಿದೆ. ಸೋಮವಾರ ಸಂಜೆ ರಾ.ಹೆ.66ರ ಪಡೀಲ್ ಮೂಲಕ ಮಂಗಳೂರು ನಗರ ಪ್ರವೇಶಿಸಿತು.ಪಡೀಲ್ ಜಂಕ್ಷನ್‌ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿದರು.



ತುಳುನಾಡ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಕಳೆದ 13 ವರ್ಷಗಳಿಂದ ಬಾವುಟಗುಡ್ಡೆಯಲ್ಲಿ ಎಪ್ರಿಲ್ 5 ರಂದು ಬಾವುಟ ಹಾರಿಸಿ ತುಳುನಾಡ ವೀರ ಯೋದರ ಸ್ಮಾರಕ ನಿರ್ಮಾಣಗೊಳಿಸಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು, ಇದೀಗ ಸ್ಮಾರಕ ಕೆದಂಬಾಡಿ ರಾಮೇಗೌಡರ ಸ್ಮಾರಕವನ್ನು ನಿರ್ಮಾಣ ಮಾಡುತ್ತಿರುವುದು ಸಂತೋಷದ ವಿಷಯ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದರು.










