ಕಾಸರಗೋಡು, ಸೆ 2 : ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಪತ್ತೆಯಾಗಿರುವುದಾಗಿ ಜಿಲ್ಲಾಧಿಕಾರಿ ಸ್ವಾಗತ್ ಭಂಡಾರಿ ನೇತೃತ್ವದಲ್ಲಿ ನಡೆಸಿದ ಅಧ್ಯಯನ ದಿಂದ ಬೆಳಕಿಗೆ ಬಂದಿದೆ.

ವಿವಿಧ ವಲಯಗಳಲ್ಲಾಗಿ 5,055 ಮಂದಿಯ ಸ್ಯಾಂಪಲ್ ಗಳನ್ನು ತಪಾಸಣೆ ನಡೆಸಲಾಗಿದ್ದು ಕಾರ್ಮಿಕರು , ವರ್ತಕರು ರಲ್ಲಿ ಸೋಂಕು ಹೆಚ್ಚಿದೆ. ವಿವಿಧ ಪ್ರಾಯದದವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಯಿತು . ಈ ಪೈಕಿ ಮಕ್ಕಳು, ಯುವಕರಲ್ಲಿ 27. 4 ಶೇಕಡಾ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

  • ಎರಡರಿಂದ 27 ವರ್ಷ ಪ್ರಾಯದ ನಡುವೆ 1, 383 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕಾರ್ಮಿಕರು ಸೇರಿದಂತೆ 1, 029 ಮಂದಿಯಲ್ಲಿ ( ಶೇ . 20. 4 ) ಮಂದಿಯಲ್ಲಿ ಸೋಂಕು ಗುರುತಿಸಲಾಗಿದೆ.ಅತೀ ಹೆಚ್ಚು ಸೋಂಕಿತರಲ್ಲಿ 18- 21 ಪ್ರಾಯ ದ 388 ಮಂದಿ ( ಶೇ . 18) , ಎರಡರಿಂದ 10 ವರ್ಷದೊಳಗಿನ 265 ಮಂದಿ ( ಶೇ . 19) , 11 ರಿಂದ 14 ವರ್ಷದ 303 ಮಂದಿಯಲ್ಲಿ ಶೇಕಡಾ 22 ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 15 ರಿಂದ 17 ವರ್ಷದೊಳಗಿನ 306 , 22 ರಿಂದ 26 ವರ್ಷದ 108 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ . 27 ವರ್ಷ ಮೇಲ್ಟಟ್ಟ 13 ಮಂದಿಗೆ ಸೋಂಕು ಪತ್ತೆಯಾಗಿದೆ.ಕೋವಿಡ್ ಮಾನದಂಡ ಉಲ್ಲಂಘಿಸಿ ಗುಂಪುಗೂಡುವುದು , ಕ್ರೀಡೆ – ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸೋಂಕು ತಗುಳಲು ಕಾರಣವಾಗುತ್ತಿದೆ ಎಂದು ಅಧ್ಯಯನ ದಿಂದ ತಿಳಿದುಬಂದಿದೆ. ಮಕ್ಕಳ ಮೂಲಕ ಸೋಂಕು ಮನೆಗಳಲ್ಲಿರುವ ಪ್ರಾಯಸ್ಥರಿಗೂ ಹರಡಲು ಕಾರಣವಾಗುತ್ತಿದೆ.ಇನ್ನು ಆನ್ ಲೈನ್ ತರಗತಿಯಾಗಿದ್ದರೂ ವಿದ್ಯಾರ್ಥಿಗಳಲ್ಲಿ ಸೋಂಕು ಹರಡುತ್ತಿರುವುದು ಗಂಭೀರ ವಿಷಯವಾಗಿದ್ದು , ಟ್ಯೂಷನ್’ನನ್ನು ನಡೆಸಬಾರದು. ಕೋವಿಡ್ ಮಾನದಂಡ ಪಾಲಿಸದ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಾಗೂ ಮಕ್ಕಳಿಗೆ ವ್ಯಾಕ್ಸಿನ್ ಆಗದಿರುವುದರಿಂದ ಅಪ್ರಾಪ್ತರು ಸಾರ್ವಜನಿಕ ಸ್ಥಳಗಳಿಗೆ ತೆರಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here